News Karnataka Kannada
Wednesday, May 08 2024
ವಿದೇಶ

ಬೀದಿ ನಾಯಿಗಳ ದಾಳಿಗೆ 6ವರ್ಷದ ಬಾಲಕ ಸಾವು

Photo Credit :

ಬೀದಿ ನಾಯಿಗಳ ದಾಳಿಗೆ 6ವರ್ಷದ ಬಾಲಕ ಸಾವು

ಭೋಪಾಲ್: ಮೈದಾನದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ಕಚ್ಚಿ ಕೊಂದು ಹಾಕಿದ ಘಟನೆ ಶುಕ್ರವಾರ ಭೋಪಾಲ್ ನ ಅವದ್ ಪುರಿಯಲ್ಲಿ ನಡೆದಿದೆ. ಮೃತ ಬಾಲಕನನ್ನು 6 ವರ್ಷದ ಸಂಜು ಎಂದು ಗುರುತಿಸಲಾಗಿದೆ.

ಮನೆಯಿಂದ 300 ಮೀಟರ್ ದೂರದಲ್ಲಿರುವ ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ 12ಕ್ಕೂ ಅಧಿಕ ನಾಯಿಗಳು ಕಚ್ಚಿ ಸಂಜುವನ್ನು ಕೊಂದು ಹಾಕಿದೆ.

ಬಾಲಕನ ತಾಯಿ ನಾಯಿಯಿಂದ ಮಗನನ್ನು ರಕ್ಷಣೆ ಮಾಡಲು ಹೋದರು ಅದು ಸಾಧ್ಯವಾಗಿಲ್ಲ.

ಬಾಲಕ ತಾಯಿ ಕಳೆದ ತಿಂಗಳು ಎರಡನೇ ಮಗುವಿಗೆ ಜನ್ಮ ನೀಡಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಮನೆಯಲ್ಲೇ ಅವರು ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದರು.

ಕೆಲಸ ಮುಗಿಸಿ ಬಂದ ಗಂಡ ಮಗನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ತಾಯಿ ಮಗನನ್ನು ಹುಡುಕಿಕೊಂಡು ಮೈದಾನಕ್ಕೆ ಹೋಗಿದ್ದಾಳೆ. ಈ ವೇಳೆ ಸಂಜು ಸುತ್ತಾ 12ಕ್ಕೂ ಅಧಿಕ ಬೀದಿ ನಾಯಿಗಳು ದಾಳಿ ನಡೆಸುತ್ತಿದ್ದವು. ರಕ್ಷಣೆಗೆ ಜೋರಾಗಿ ಕೂಗಿ ಮನೆಯವರನ್ನು ಕರೆತರಲು ಹೋಗಿದ್ದಾಳೆ. ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ವೈದ್ಯರು ಬಾಲಕ ಈಗಾಗಲೇ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು