ಪ್ಯಾರಿಸ್ : ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ದೋಣಿ ಮುಳುಗಿ ಬ್ರಿಟನ್ಗೆ ಪ್ರಯಾಣಿಸುತ್ತಿದ್ದ ಕನಿಷ್ಠ ಪಕ್ಷ 31 ವಲಸಿಗರು ಮೃತಪಟ್ಟಿದ್ದಾರೆ. ಇದು ವಲಸಿಗರಿಗೆ ಸಂಬಂಧಪಟ್ಟಂತೆ ಇದುವರೆಗಿನ ಅತಿದೊಡ್ಡ ದುರಂತ ಎಂದು ಫ್ರಾನ್ಸ್ನ ಒಳಾಡಳಿತ ಸಚಿವ ಗೆರಾಲ್ಡ್ ಡಾರ್ಮನಿನ್ ಅವರು ತಿಳಿಸಿದ್ದಾರೆ.
ದೋಣಿಯಲ್ಲಿ 34 ಜನರು ಪ್ರಯಾಣಿಸುತ್ತಿದ್ದರೆಂದು ನಂಬಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಅಧಿಕಾರಿಗಳು ಐವರು ಮಹಿಳೆಯರು ಮತ್ತು ಓರ್ವ ಬಾಲಕಿ ಸೇರಿದಂತೆ 31 ಶವಗಳನ್ನು ಪತ್ತೆ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಬದುಕುಳಿದಿದ್ದಾರೆ. ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಪ್ರಯಾಣಿಕರು ಯಾವ ದೇಶಕ್ಕೆ ಸೇರಿದವರೆಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.