News Karnataka Kannada
Monday, April 29 2024
ವಿದೇಶ

ಲಿಬಿಯಾದಲ್ಲಿ ಬೋಟ್‌ ಮಗುಚಿ 17 ಮಂದಿಕ್ಕೂ ಅಧಿಕ ಮಂದಿ ಸಾವು

Suicide Jump River
Photo Credit :

ಕೈರೊ: ಲಿಬಿಯಾದಲ್ಲಿ ಹತ್ತಾರು ವಲಸಿಗರನ್ನು ಒಳಗೊಂಡಿದ್ದ ಬೋಟ್‌ ಮಗುಚಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ.

ಆಶ್ರಯ ಅರಸಿ ಯುರೋಪ್‌ಗೆ ತೆರಳುತ್ತಿದ್ದವರಿದ್ದ ಬೋಟ್ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದೆ. ಲಿಬಿಯಾದ ಜುವಾರಾ ನಗರದ ಬಳಿ ದುರಂತ ಸಂಭವಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬೋಟ್‌ನಲ್ಲಿ ಸುಮಾರು 70 ವಲಸಿಗರಿದ್ದರು. 51 ಮಂದಿಯನ್ನು ಲಿಬಿಯಾದ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ. ಒಂದು ಮೃತದೇಹ ಪತ್ತೆಯಾಗಿದೆ. ಕಣ್ಮರೆಯಾಗಿರುವವರಿಗಾಗಿ ಶೋಧ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ತಿಂಗಳಷ್ಟೇ ಲಿಬಿಯಾದಲ್ಲಿ ನಡೆದಿದ್ದ ಎರಡು ಬೋಟ್ ದುರಂತಗಳಲ್ಲಿ 80 ವಲಸಿಗರು ಮೃತಪಟ್ಟಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು