News Karnataka Kannada
Wednesday, May 08 2024
ವಿದೇಶ

ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಎಂ.ಐ.-8 ಹೆಲಿಕ್ಯಾಪ್ಟರ್ ಪತನ ; 8 ಜನ ಕಣ್ಮರೆ

Helicopter Search (
Photo Credit :

ಮಾಸ್ಕೋ, ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಎಂ.ಐ.-8 ಹೆಲಿಕ್ಯಾಪ್ಟರ್ ಪತನಗೊಂಡ ಪರಿಣಾಮ ಎಂಟು ಜನರು ಕಣ್ಮರೆಯಾಗಿರುವ ಘಟನೆ ರಷ್ಯಾ ದೇಶದ ಕಮ್ಚಟ್ಕಾ ಪ್ರದೇಶದಲ್ಲಿರುವ ಕುರಿಲ್ ಸರೋವರದಲ್ಲಿ ನಡೆದಿದೆ.
ವಿಟಜ್-ಏರೋ ವಿಮಾನಯಾನ ಸಂಸ್ಥೆಗೆ ಈ ಹೆಲಿಕ್ಯಾಪ್ಟರ್ ಸೇರಿದ್ದಾಗಿದೆ. ಮೂವರು ಸಿಬ್ಬಂದಿಗಳು ಸೇರಿದಂತೆ ಒಟ್ಟಾರೆ 16 ಪ್ರವಾಸಿಗರು ಹೆಲಿಕ್ಯಾಪ್ಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಹೆಲಿಕ್ಯಾಪ್ಟರ್ ಪತನಗೊಂಡಿದೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಸುಮಾರು 8 ಮಂದಿ ಬದುಕುಳಿದಿದ್ದಾರೆ. 8 ಮಂದಿ ನಾಪತ್ತೆಯಾಗಿದ್ದು, ಅವರ ಶೋಧ ಕಾರ್ಯಾಚರಣೆಯನ್ನು ರಕ್ಷಣಾ ಸಿಬ್ಬಂದಿಗಳು ನಡೆಸುತ್ತಿದ್ದಾರೆ. ನುರಿತ ಈಜು ಪಟುಗಳು, ಡೈವರ್‌ಗಳು ಸೇರಿದಂತೆ ಸುಮಾರು 40 ಕ್ಕೂ ಅಧಿಕ ತಜ್ಞ ರಕ್ಷಣಾ ಸಿಬ್ಬಂದಿಗಳು ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಲಿಕ್ಯಾಪ್ಟರ್ ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. 37 ವರ್ಷಗಳ ಹಿಂದೆ ಈ ಹೆಲಿಕಾಪ್ಟರ್ ನಿರ್ಮಿಸಲಾಗಿತ್ತು. ಇತ್ತೀಚೆಗೆ ನಿರ್ವಹಣೆಗೆ ಒಳಪಟ್ಟು ಉತ್ತಮ ಕಾರ್ಯಕ್ಷಮತೆ ಹೊಂದಿತ್ತು. ತನಿಖೆಯ ನಂತರವಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಸಂಸ್ಥೆ ತಿಳಿಸಿದೆ.
ನಿಗೂಢ: ಹೆಲಿಕ್ಯಾಪ್ಟರ್ ಪತನ ಪ್ರಕರಣವು ಸಂಪೂರ್ಣ ನಿಗೂಢವಾಗಿದೆ. ಬದುಕುಳಿದವರು ಹಾಗೂ ನಾಪತ್ತೆಯಾದವರ ಸಂಖ್ಯೆಯಲ್ಲಿ ಸ್ಪಷ್ಟತೆ ಲಭ್ಯವಾಗುತ್ತಿಲ್ಲ. ಈ ನಡುವೆ ಪ್ರಕರಣದ ಕುರಿತಂತೆ ಸ್ಥಳೀಯ ಸರ್ಕಾರವು ಉನ್ನತ ತನಿಖೆಗೆ ಆದೇಶಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು