ಗುವಾಹಟಿ: ಅಸ್ಸಾಂನ ಬಘಜಾನ್ ನಲ್ಲಿ ಇರುವ ತೈಲ ಬಾವಿಗೆ ಬೆಂಕಿ ಬಿದ್ದ ಪರಿಣಾಮ ಅದನ್ನು ನಂದಿಸಲು ಹೋಗಿದ್ದ ಅಗ್ನಿಶಾಮಕ ದಳದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬೆಂಕಿಯಿಂದಾಗಿ ಸುತ್ತಲಿನ 50 ಮನೆಗಳು ಸುಟ್ಟು ಕರಕಲಾಗಿದೆ ಎಂದು ವರದಿಗಳು ತಿಳಿಸಿವೆ. ಆಯಿಲ್ ಇಂಡಿಯಾ ಲಿಮಿಟೆಡ್ ಸ್ವಾಮ್ಯದ ತೈಲ ಬಾವಿಯಲ್ಲಿ ಉಂಟಾದ ಬೆಂಕಿಯು ಸುಮಾರು 30 ಕಿ.ಮೀ. ದೂರದಿಂದಲೇ ಕಾಣಿಸುತ್ತಿತ್ತು.
ಅಗ್ನಿಶಾಮಕ ದಳದ ಇಬ್ಬರ ಶವನ್ನು ಹೊರಗೆ ತೆಗೆಯಲಾಗಿದೆ ಎಂದು ವರದಿಗಳು ಹೇಳಿವೆ ಮತ್ತು ಅಗ್ನಿಶಾಮಕ ದಳದವರು ಅಗ್ನಿ ತಹಬಂದಿಗೆ ತರಲು ಪ್ರಯತ್ನಿಸುತ್ತಿದ್ದಾರೆ.