ನವದೆಹಲಿ: ದೇಶದಲ್ಲಿ ಅಕ್ಟೋಬರ್ ಬಳಿಕ ಮೊದಲ ಸಲ ಒಂದೇ ದಿನದಲ್ಲಿ ಗರಿಷ್ಠ ಕೊರೋನಾ ಸೋಂಕಿತರು ಪತ್ತೆಯಾಗಿರುವರು.
ಶುಕ್ರವಾರ ಒಟ್ಟು 59.118 ಮಂದಿ ಸೋಂಕಿತರು ಪತ್ತೆಯಾಗಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆಯು ದೇಶದಲ್ಲಿ 1.18 ಕೋಟಿಗೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.
ಸಕ್ರಿಯ ಸೋಂಕಿತರ ಸಂಖ್ಯೆಯು 4 ಲಕ್ಷ ದಾಟಿದೆ. ಇದರಿಂದ ದೇಶದಲ್ಲಿ ಒಟ್ಟು 4,21,066 ಮಂದಿ ಸೋಂಕಿತರು ಇದ್ದಾರೆ. ಚೇತರಿಕೆ ಸಂಖ್ಯೆಯು ಶೇ. 95.09ಕ್ಕೆ ಕುಸಿತವಾಗಿದೆ.
ದೇಶದಲ್ಲಿ ಸತತ 16ನೇ ದಿನವೂ ಕೊರೋನಾ ಸೋಂಕಿತರ ಸಂಖ್ಯೆಯು ಹೆಚ್ಚಾಗಿದೆ. ಒಟ್ಟು ಸಾವಿನ ಸಂಖ್ಯೆಯು 1.60.949ಕ್ಕೆ ಏರಿಕೆ ಆಗಿದೆ.