ಕಾಬುಲ್: ಕಾಬುಲ್ಅನ್ನು ಆಕ್ರಮಿಸಿಕೊಂಡು ಅಫ್ಘಾನಿಸ್ತಾನದ ಅಧ್ಯಕ್ಷೀಯ ಅರಮನೆ, ಸಂಸತ್ತು ಮತ್ತು ಸರ್ಕಾರಿ ಕಚೇರಿಗಳನ್ನು ವಶಪಡಿಸಿಕೊಂಡ 10 ದಿನಗಳ ನಂತರ, ತಾಲಿಬಾನಿಗಳು, ಇದೀಗ ತಮ್ಮ ಸರ್ಕಾರ ರಚನೆಯತ್ತ ಗಮನ ಹರಿಸಿದ್ದಾರೆ. ತಾಲಿಬಾನ್ ಡೆಪ್ಯುಟಿ ಲೀಡರ್ ಹಾಗೂ ಸ್ಥಾಪಕರಲ್ಲೊಬ್ಬನಾದ ಮುಲ್ಲಾ ಅಬ್ದುಲ್ ಘನಿ ಬರಾದರ್ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷನಾಗಲಿದ್ದಾನೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ತಾಲಿಬಾನ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲದಿದ್ದರೂ, ತಾಲಿಬಾನ್ ತನ್ನ ಹಿರಿಯ ನಾಯಕರನ್ನು ವಿವಿಧ ಸಚಿವ ಸ್ಥಾನಗಳಿಗೆ ಹೆಸರಿಸಿದೆ ಎನ್ನಲಾಗಿದೆ. ಈ ಹಿಂದೆ ಕ್ಯೂಬಾದ ಗೌಂಟನಾಮೊ ಬೇನಲ್ಲಿನ ಅಮೆರಿಕಾ ಜೈಲಿನಲ್ಲಿದ್ದ ಮುಲ್ಲಾ ಅಬ್ದುಲ್ ಖಯ್ಯುಮ್ ಜಕೀರ್ ಹೊಸ ಆಡಳಿತದ ರಕ್ಷಣಾ ಸಚಿವನಾಗಲಿದ್ದಾನೆ. ತಾಲಿಬಾನ್ನ ಆರ್ಥಿಕ ವ್ಯವಹಾರಗಳ ಮುಖ್ಯಸ್ಥ ಗುಲ್ ಆಘಾ ಹೊಸ ಹಣಕಾಸು ಸಚಿವನಾಗಲಿದ್ದಾನೆ ಎನ್ನಲಾಗಿದೆ.
ತಾಲಿಬಾನ್ ಉಗ್ರ ಅಬ್ದುಲ್ ಘನಿ ಬರಾದರ್ಗೆ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷ ಪಟ್ಟ ?
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.