News Karnataka Kannada
Monday, April 29 2024
ಕರ್ನಾಟಕ

15 ಸಾವಿರ ರೂಪಾಯಿಗೆ ನಾಯಿ ಖರೀದಿಸಲು ಹೋಗಿ 66 ಲಕ್ಷ ರೂ ಕಳೆದುಕೊಂಡ ಮಹಿಳೆ

Cyber Fraud 16 7 21
Photo Credit :

ಬೆಂಗಳೂರು: ಆನ್‌ಲೈನ್‌ನಲ್ಲಿ ನಾಯಿ ಕೊಳ್ಳಲು ಹೋಗಿ ಮಹಿಳೆಯೊಬ್ಬರು 66 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡೆಹ್ರಾಡೂನ್​​ ಮೂಲದ 50 ವರ್ಷದ ಮಹಿಳೆ ಗೋಲ್ಡನ್​ ರಿಟ್ರೈವರ್​ ತಳಿಯ ನಾಯಿ ಕೊಳ್ಳಲು ಹೋಗಿ ಮೋಸ ಹೋಗಿದ್ದಾರೆ.
ಸದ್ಯ ಇವರು ಪೊಲೀಸರಿಗೆ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಉತ್ತರಾಖಂಡ್​ ಪೊಲೀಸರು ಡಿಂಗ್​ ಬೋಗ್ಬಾ ಕ್ಲಾವ್ಸ್​ ಅಲಿಯಾಸ್​ ಬಾಬಿ ಇಬ್ರಾಹಿಂನನ್ನು ಬಂಧಿಸಿದ್ದಾರೆ. ಬಾಬಿಯನ್ನು ಡೆಹ್ರಾಡೂನ್​ಗೆ ಕರೆತರಲಾಗಿದ್ದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.ಮಹಿಳೆಯರು ಆನ್‌ಲೈನ್‌ನಲ್ಲಿ ಗೋಲ್ಡನ್​ ರಿಟ್ರೈವರ್​ ತಳಿಯ ನಾಯಿಗೆ ಹುಡುಕಾಟ ನಡೆಸಿದ್ದರು. ಮಗಳಿಗೆ ಜನ್ಮದಿನದಂದು ಉಡುಗೊರೆ ರೂಪದಲ್ಲಿ 15 ಸಾವಿರ ರೂ. ಮೌಲ್ಯದ ಶ್ವಾನವನ್ನು ಖರೀದಿಸಬೇಕೆಂದುಕೊಂಡಿದ್ದರು ಆಗ ಅಲ್ಲಿ ಪರಿಚಯವಾಗಿದ್ದು, ಬಾಬಿ ಇಬ್ರಾಹಿಂ, ಇಂಥ ಬಲಿಪಶುಗಳಿಗಾಗಿ ಕಾಯುತ್ತಿದ್ದ ಇಬ್ರಾಹಿಂ, ತಾನು ಉತ್ತಮ ತಳಿಯ ನಾಯಿ ಕೊಡುವುದಾಗಿ ಹೇಳಿದ್ದಾನೆ ನಂತರ ಸ್ವಲ್ಪ ಸ್ವಲ್ಪ ಹಣ ಪಡೆದುಕೊಂಡು ಪುಸಲಾಯಿಸಿ 66 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾನೆ. 66 ಲಕ್ಷ ರೂ. ಕಳೆದುಕೊಂಡ ಮೇಲೆ ಮಹಿಳೆಗೆ ತಾವು ಮೋಸ ಹೋಗಿರುವುದು ತಿಳಿದಿದೆ. ನಂತರ ಅವರು ದೂರು ದಾಖಲು ಮಾಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಹಲವಾರು ಮೊಬೈಲ್ ಫೋನ್​, ಲ್ಯಾಪ್​ಟಾಪ್​, ಎಟಿಎಂ ಕಾರ್ಡ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು