ಆಂಧ್ರಪ್ರದೇಶ: ಟ್ರಕ್ ವೊಂದು ಮಿನಿ ಬಸ್ ಮೇಲೆ ಎರಗಿದ ಪರಿಣಾಮ ಓರ್ವ ಸಾವನ್ನಪ್ಪಿ 20ಮಂದಿ ಗಾಯಗೊಂಡಿರುವ ಘಟನೆ ಇಂದು ಆಂಧ್ರಪ್ರದೇಶದ ಟೆಡ್ಡೂಪಡು ಹಳ್ಳಿಯಲ್ಲಿ ನಡೆದಿದೆ.
ಪೊಲೀಸರು ಮಾತನಾಡಿ, ಅವಘಡದಲ್ಲಿ ಟ್ರಕ್ ಡ್ರೈವರ್ ಸಾವನ್ನಪ್ಪಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರು ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಲ್ಲಿದ್ದವರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ರಾಯಚೋಟಿಯಿಂದ ಗುಂಟೂರಿಗೆ ಪ್ರಯಾಣ ಬೆಳೆಸಿದ್ದರು.