ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗವು ಜೂನ್ 27 ಕ್ಕೆ ನಿಗದಿಯಾಗಿದ್ದ ಯುಪಿಎಸ್ಸಿ ಪ್ರಿಲಿಮ್ಸ್ 2021 ಪರೀಕ್ಷೆಯನ್ನ ಮುಂದೂಡಿವಂತೆ ತಿಳಿಸಿದೆ.
ಕೊರೊನಾ ಸೋಂಕಿನಿಂದ ಉಂಟಾದ ಪ್ರಸ್ತುತ ಪರಿಸ್ಥಿತಿಗಳಿಂದಾಗಿ, ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ 2021 ಅನ್ನು ಮುಂದೂಡಿದೆ. ಜೂನ್ 27 ರಂದು ನಡೆಯಲಿದ್ದ ಈ ಪರೀಕ್ಷೆ ಅಕ್ಟೋಬರ್ 10 ರಂದು ನಡೆಯಲಿದೆ ‘ಎಂದು ಯುಪಿಎಸ್ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಧ್ಯದ ಬಿಕ್ಕಟ್ಟಿನಿಂದಾಗಿ ಯುಪಿಎಸ್ಸಿ ಇತ್ತೀಚೆಗೆ ಹಲವಾರು ಪರೀಕ್ಷೆಗಳನ್ನ ಮುಂದೂಡಿದೆ. ಎಸ್ ಎಸ್ಸಿ ಸಿಜಿಎಲ್ ನಂತಹ ಇತರ ನಡೆಯುತ್ತಿರುವ ಸರ್ಕಾರಿ ನೇಮಕಾತಿ ಪರೀಕ್ಷೆಗಳು ಮತ್ತು ಎಸ್ಎಸ್ಸಿ ಸಿಎಚ್ಎಸ್ಎಲ್ ನ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ.