News Karnataka Kannada
Sunday, May 12 2024
ವಿದೇಶ

ಚೀನಾದಿಂದ ಹೊಸ ಜೆ-10ಸಿ ಜೆಟ್‌ ಖರೀದಿಸಿದ ಪಾಕಿಸ್ತಾನ ಸೇನೆ

J 10 C Jet
Photo Credit :

ಭಾರತ ಖರೀದಿಸಿದ ರಫೇಲ್‌ ಯುದ್ಧ ವಿಮಾನಗಳ ಪ್ರತಿಯಾಗಿ ಬಳಸಲು ಪಾಕಿಸ್ತಾನ ಮೇಡ್‌ ಇನ್‌ ಚೀನಾದ ಜೆ-10ಸಿ ಫೈಟರ್‌ ಜೆಟ್‌ ಖರೀದಿಸಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿದೆ. ಪಾಕಿಸ್ತಾನ ಸೇನೆ ತನ್ನ ಮಿತ್ರ ರಾಷ್ಟ್ರ ಚೀನಾದಿಂದ ಜೆ-10ಸಿ ಫೈಟರ್‌ ಜೆಟ್‌ ಅನ್ನು ಖರೀದಿಸಿರುವ ಬಗ್ಗೆ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಚೀನಾ ಯುದ್ಧವಿಮಾನಗಳು ಪಾಕ್‌ ಸೇನಾ ಪಡೆಗೆ ಸೇರ್ಪಡೆಗೊಂಡಿದ್ದು, ಭಾರತ ಫ್ರಾನ್ಸ್ ನಿಂದ ಖರೀದಿಸಿದ ರಫೇಲ್ ಯುದ್ಧವಿಮಾನದ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದರು. ಈ ಹೊಸ ಜೆಟ್‌ ನ ಸೇರ್ಪಡೆಯಿಂದ ಪಾಕ್ ಸೇನೆಗೆ ಬಲ ಬಂದಿದೆ ಎಂದರು.

ಪಾಕಿಸ್ತಾನ ವಾಯುಪಡೆ (ಪಿಎಎಫ್) ಬೇಸ್ ಮಿನ್ಹಾಸ್ ಕಮ್ರಾದಲ್ಲಿ ಹೊಸ ಜೆಟ್‌ಗಳು ಸೇರ್ಪಡೆಗೊಂಡಿದೆ. ಈ ಹಿಂದೆ ಪಾಕಿಸ್ತಾನ ಅಮೆರಿಕದಿಂದ ಎಫ್-16ಎಸ್‌ ಅನ್ನು ಖರೀದಿಸಿ ಭಾರತದ ರಫೇಲ್‌ ಗೆ ಸಮವಾಗಲಿದೆ ಎಂದಿತ್ತು. ಆದರೆ ಈಗ ಪಾಕ್‌ ತನ್ನ ವಾಯುಸೇನೆಯ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಜೆ-10ಸಿ ಜೆಟ್‌ ಖರೀದಿಸಿದೆ.

 ಜೆ-10 ಸಿ ಜೆಟ್‌ 

  • ಇದು ಸಂಪೂರ್ಣ ಏವಿಯಾನಿಕ್‌ ಮತ್ತು ಯುದ್ಧ ವ್ಯವಸ್ಥೆಗೆ ಬಳಸುವಂತಾಗಿದೆ.
  • ಇದರಲ್ಲಿ ದೊಡ್ಡದಾದ ಎಲೆಕ್ಟ್ರಾನಿಕ್‌ ಸ್ಕ್ಯಾನ್‌ ಅರೇ ರೆಡಾರ್‌ ಇದೆ.
  • ಇದು ಏರ್‌ ಟು ಏರ್‌ ಕ್ಷಿಪಣಿಗಳನ್ನು ನಾಲ್ನೇ ಜನರೇಷನ್‌ ನಲ್ಲಿ ಸಾಗಿಸಬಹುದು,
  • ಇದು ಪಾಕ್‌ ಹಾಗೂ ಚೀನಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಜೆಎಫ್-17‌ ಗಿಂತ ಶಕ್ತಿಶಾಲಿಯಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು