News Karnataka Kannada
Saturday, May 04 2024
ವಿದೇಶ

ಚೀನಾದಿಂದ ಭಾರತೀಯ ಯುವಕ ಕಿಡ್ನಾಪ್

19th round of Corps Commander-level meeting between India, China
Photo Credit :

ನವದೆಹಲಿ: ಡ್ರ್ಯಾಗನ್ ದೇಶ ಚೀನಾ ಸೇನೆ ಭಾರತದ ಜೊತೆಗೆ ಆಗಾ ಆಗಾ ಕ್ಯಾತೆ ತೆಗೆಯುತ್ತಿರುತ್ತದೆ. ಈಗ ಅರುಣಾಚಲ ಪ್ರದೇಶದ ಯುವಕನನ್ನು ಅಪಹರಣ ಮಾಡಿದೆ ಎಂದು ಸಂಸದ ತಪಿರ್ ಗಾವೊ ಗಂಭೀರ ಆರೋಪ ಮಾಡಿದ್ದಾರೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ), ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ 17 ವರ್ಷದ ಅಪ್ರಾಪ್ತ ಬಾಲಕ ಮಿರಾಮ್ ಟ್ಯಾರೋನ್ ನನ್ನು ಮಂಗಳವಾರ ಲುಂಗ್ಟಾ ಜೋರ್ ಪ್ರದೇಶದಿಂದ ಅಪಹರಣ ಮಾಡಿದ್ದಾರೆ ಎಂದು ಸಂಸದ ಹೇಳಿದ್ದಾರೆ.

ಮಿರಾಮ್ ಟ್ಯಾರೋ ಮತ್ತು ಆತನ ಸ್ನೇಹಿತ ಜಾನಿ ಯಾಯಿಂಗ್ ಜಿಡೋ ಗ್ರಾಮದ ಭೇಡೆಗಾರಾಗಿದ್ದಾರೆ. ಇವರು ಸಿಯಾಂಗ್ ನದಿ ತೀರಕ್ಕೆ ಹೋದಾಗ ಚೀನಿ ಸೈನಿಕರು ಅಪಹರಣ ಮಾಡಲು ಮುಂದಾಗಿದ್ದಾರೆ, ಆಗ ಟ್ಯಾರೋ ನ ಸ್ನೇಹಿತ ಜಾನಿ ಯಾಯಿಂಗ್ ಅವರಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಆದರೆ ಮಿರಾಮ್ ಟ್ಯಾರೋ ಸಿಕ್ಕಿಹಾಕಿಕೊಂಡಿದ್ದಾನೆ ಎಂದು  ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.

ಈ ಕುರಿತು ಟ್ವೀಟ್ ಮಾಡಿರುವ ಸಂಸದ ಗಾವೋ, “ಚೀನೀ PLA ಅವರು 17 ವರ್ಷದ ಮಿರಾಮ್ ಟ್ಯಾರೋನ್ ಅವರನ್ನು ಅಪಹರಿಸಿದ್ದಾರೆ. ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಆತನನ್ನು ಶೀಘ್ರ ಬಿಡುಗಡೆ ಮಾಡಲು ಮುಂದಾಗುವಂತೆ ವಿನಂತಿಸಲಾಗಿದೆ  ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು