ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೊರೋನಾ ಲಸಿಕೆ ತಯಾರಿಕೆ ಹಾಗೂ ಅಭಿವೃದ್ಧಿ ನಡೆಸುತ್ತಿರುವ ಕಂಪೆನಿಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.
ಮೊದಲಿಗೆ ಗುಜರಾತ್ ನ ಅಹ್ಮದಾಬಾದ್ ಗೆ ತೆರಳಿದ ಪ್ರಧಾನಿ, ಝೈಡೂಸ್ ಬಯೋಟೆಕ್ ಪಾರ್ಕ್ ನಲ್ಲಿರುವ ಝೈಡೂಸ್, ಕ್ಯಾಡಿಲಾ ಕಂಪೆನಿಗಳು ನಡೆಸುತ್ತಿರುವಂತಹ ಲಸಿಕೆ ತಯಾರಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲಿಂದ ಅವರು ಹೈದರಾಬಾದ್ ಗೆ ತೆರಳಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ 19 ಲಸಿಕೆ ಬಗ್ಗೆ ಪರಿಶೀಲಿಸಲಿರುವರು.
ಪುಣೆಯ ಸಿರಮಿಕ್ ಡ್ಯೂಟಿ ಆಫ್ ಇಂಡಿಯಾಗೂ ಮೋದಿ ಅವರು ಭೇಟಿ ನೀಡಲಿದ್ದಾರೆ.
ಕೋವಿಡ್ 19 ವಿರುದ್ಧದ ಹೋರಾಟವು ಒಂದು ನಿರ್ಣಾಯಕ ಹಂತಕ್ಕೆ ಬರುತ್ತಿದ್ದಂತೆ ಪ್ರಧಾನಿ ಮೋದಿ ಅವರು ಈ ಎಲ್ಲಾ ಸೌಲಭ್ಯದ ಕಡೆ ಭೇಟಿ ಮಾಡಿ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಇದು ಮುಂಜಾಗ್ರತೆಯನ್ನು ತೆಗೆದುಕೊಳ್ಳಲು ಸಹಕಾರಿಯಾಗಿದೆ ಎಂದು ಪ್ರಧಾನಮಂತ್ರಿಯ ಕಛೇರಿಯ ಶುಕ್ರವಾರ ತಿಳಿಸಿದೆ.