News Karnataka Kannada
Monday, April 29 2024
ವಿದೇಶ

ಕಾಶ್ಮೀರದಲ್ಲಿ ಅನುಮಾನಾಸ್ಪದ ವಸ್ತುವಿನ ಹಾರಾಟ ; ಗುಂಡಿನ ಧಾಳಿ

Kashmir Attack 7 7 21
Photo Credit :

ಜಮ್ಮು, ;ಅಂತಾರಾಷ್ಟ್ರೀಯ ಗಡಿ ಭಾಗದ ಬಾನಂಗಳದಲ್ಲಿ ಮತ್ತೆ ಅನುಮಾನಾಸ್ಪದ ವಸ್ತುವಿನ ಹಾರಾಟ ಕಂಡು ಬಂದಿದೆ. ಕಣಿವೆ ರಾಜ್ಯದ ಅರ್ನಿಯಾ ಸೆಕ್ಟರ್ ಸಮೀಪದ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಯಾವುದೋ ವಸ್ತು ಹಾರಾಡುತ್ತಿರುವುದನ್ನು ಕಂಡ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಮುಂಜಾನೆ 5.30ರ ಸಮಯದಲ್ಲಿ ಅಂತಾರಾಷ್ಟ್ರೀಯ ಗಡಿ ಭಾಗದ ಬಾನಂಗಳದಲ್ಲಿ ಕೆಂಪು ಮತ್ತು ಹಳದಿ ಬೆಳಕು ಕಾಣಿಸಿಕೊಂಡಿತ್ತು. ಅನುಮಾನಾಸ್ಪದ ಬೆಳಕು ಕಂಡ ಯೋಧರು ಆ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದರು.ತಕ್ಷಣ ಅನುಮಾನಾಸ್ಪದ ವಸ್ತುವಿನ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ತಕ್ಷಣ ಆಕಾಶದಲ್ಲಿದ್ದ ವಸ್ತು ಪಾಕಿಸ್ತಾನದತ್ತ ವಾಪಸಾಯಿತು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅನುಮಾನಾಸ್ಪದ ವಸ್ತುವಿಗೆ ಗುಂಡು ತಗುಲಿ ಹಾನಿಯಾಗಿ ಭೂಮಿಗೆ ಉರುಳಿ ಬಿದ್ದಿರುವ ಸಾಧ್ಯತೆ ಹಿನ್ನಲೆಯಲ್ಲಿ ಪ್ರದೇಶದಾದ್ಯಂತ ಹುಡುಕಾಟ ನಡೆಸಲಾಗುತ್ತಿದೆ ಎಂದು ಸೇನಾ ಮೂಲಗಳು ಉಲ್ಲೇಖಿಸಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು