News Karnataka Kannada
Saturday, May 04 2024
ಮಂಗಳೂರು

ಹೈಕೋರ್ಟ್ ಆದೇಶ ಉಲ್ಲಂಘಿಸಿದ ಕರ್ನಾಟಕದ ವಿರುದ್ಧ ತಲಪಾಡಿ ಗಡಿಯಲ್ಲಿ ಸಿಪಿಐಎಂ ಪ್ರತಿಭಟನೆ

New Project (11)
Photo Credit :

ಉಳ್ಳಾಲ : ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶ ಉಲ್ಲಂಘಿಸಿ ಗಡಿ ಬಂದ್ ಮಾಡುವುದನ್ನು ವಿರೋಧಿಸಿ ಕೇರಳ ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ತಲಪಾಡಿ ಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು


ಈ ಸಂದರ್ಭದಲ್ಲಿ ಮಾತನಾಡಿದ ಉದುಮ ಶಾಸಕ ಸಿ.ಎಚ್.ಕುಂಞಬು ರವರು ಕೊರೊನ ಹೆಸರಿನಲ್ಲಿ ಕರ್ನಾಟಕ ಬಿಜೆಪಿ ಸರ್ಕಾರ ಗಡಿ ಬಂದ್ ಮಾಡಿ ಗಡಿನಾಡ ಕೇರಳಿಗರಿಗೆ ತೊಂದರೆ ಮಾಡುತ್ತಿದೆ.ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ , ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಚುನಾವಣೆ ಸಂದರ್ಭದಲ್ಲಿ ಕೇರಳ ಭೇಟಿ ನೀಡಿ ಗಡಿ ನಾಡ ಕೇರಳಿಗರಿಗೆ ಪೂರ್ಣ ಬೆಂಬಲ, ಸಹಕಾರ ತಮ್ಮಿಂದ ಇದೆ ಎಂದು ಹೇಳಿದ್ದರು.

 

ಆದರೆ ಅವರು ಹೇಳಿದ ಮಾತುಗಳನ್ನು ಉಳಿಸಲು ಅವರಿಗೆ ಆಗಲಿಲ್ಲ. ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲು ಆಗಲಿಲ್ಲ ಎಂಬ ಕಾರಣದಿಂದ ಕೇರಳಿಗರಿಗೆ ತೊಂದರೆ ಕೊಡಲು ಹೊರಟಿದ್ದು ನ್ಯಾಯೋಚಿತವಲ್ಲ. ಪ್ರತಿ ವಿಚಾರ ಗಳಿಗೂ ಗಡಿಯಲ್ಲಿ ಹೋರಾಟ ಮಾಡುತ್ತಿದ್ದ ಕೇರಳ ಬಿಜೆಪಿಗರು ಈಗ ಮೌನ ಆಗಿದ್ದಾರೆ. ಭರವಸೆ ಮಾತು ನೀಡಿ ಅನ್ಯಾಯ ಮಾಡುವ ಕಟೀಲ್ ರಂತಹ ಸಂಸದರು ಆಡಳಿತ ನಡೆಸಲು ಯೋಗ್ಯರಲ್ಲ.

ಗಡಿ ಬಂದ್ ಮಾಡುವ ಅಧಿಕಾರ ಕರ್ನಾಟಕ ಸರ್ಕಾರಕ್ಕೆ ಇಲ್ಲ . ಒಂದು ವೇಳೆ ಬಂದ್ ಮಾಡಲೇಬೇಕು ಎಂದಿದ್ದರೆ ಕೇಂದ್ರಕ್ಕೆ ಬಂದ್ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದರು. ಸಿಪಿಐಎಂ ಮುಖಂಡ ದಯಾನಂದ್,ಶಂಕರ್ ರೈ ಮಾಸ್ಟರ್ ಮಾತನಾಡಿದರು
ಸಿಪಿಐಎಂ ಮಂಜೇಶ್ವರ ಏರಿಯಾ ಮುಖಂಡ ಅರವಿಂದ ಅಧ್ಯಕ್ಷತೆ ವಹಿಸಿದ್ದರು.ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ, ಪೈವಳಿಕೆ ಪಂಚಾಯಿತಿ ಅಧ್ಯಕ್ಷೆ ಜಯಂತಿ,ಬೂಬಾ ಡಿ., ಕಮಲಾಕ್ಷ, ನವೀನ್, ರವೀಂದ್ರ ಶೆಟ್ಟಿ,ಅಬ್ದುಲ್ ರಜಾಕ್,ಸುಬ್ಬಣ್ಣ ಆಳ್ವ,ಸಮಿತಿ ಸದಸ್ಯಅರವಿಂದ್ ಮೊದಲಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು