News Karnataka Kannada
Wednesday, May 01 2024
ವಿದೇಶ

ಭಾರತದ ಪ್ರಭಾವವನ್ನು ತಗ್ಗಿಸುವದು ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಗುರಿ : ಅಮೆರಿಕದ ವಿದೇಶಾಂಗ ಇಲಾಖೆ

America Visa Dt 18 6 21 No1862120 Newsk 7902028532
Photo Credit :

ವಾಷಿಂಗ್ಟನ್‌ :ಅಫ್ಘಾನಿಸ್ತಾನಕ್ಕೆ ಹಾಗೂ ಪಾಕಿಸ್ತಾನಕ್ಕೆ ಎರಡು ವ್ಯೂಹಾತ್ಮಕ ಭದ್ರತಾ ಗುರಿಗಳಿವೆ. ಒಂದು, ನಿಶ್ಚಿತವಾಗಿಯೂ ಭಾರತದ ಪ್ರಭಾವವನ್ನು ತಗ್ಗಿಸುವ ಪ್ರಯತ್ನ ಮುಂದುವರಿಸುವುದು. ಎರಡು, ಅಫ್ಘಾನಿಸ್ತಾನದ ನಾಗರಿಕ ಸಮರ ತನ್ನ ದೇಶದೊಳಗೆ ನುಸುಳದಂತೆ ನೋಡಿಕೊಳ್ಳುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಕಚೇರಿಯ ಮಹಾನಿರೀಕ್ಷಕರು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿ ತಿಳಿಸಿದೆ.

ಏ.1ರಿಂದ ಜೂ.30ರವರೆಗಿನ ವರದಿ ಇದಾಗಿದೆ. ಒಂದು ವೇಳೆ ಅಫ್ಘಾನಿಸ್ತಾನದಲ್ಲಿ ನಾಗರಿಕ ದಂಗೆ ಎದ್ದರೆ, ನಿರಾಶ್ರಿತರು ತನ್ನ ದೇಶಕ್ಕೆ ಬರುತ್ತಾರೆ. ತನ್ಮೂಲಕ ಪಾಕಿಸ್ತಾನ ವಿರೋಧಿ ಉಗ್ರರಿಗೆ ಆಶ್ರಯ ನೀಡಿದಂತಾಗುತ್ತದೆ ಎಂಬ ಭಾವನೆಯನ್ನು ಪಾಕಿಸ್ತಾನ ಹೊಂದಿದೆ. ಪಾಕಿಸ್ತಾನ ಒಂದೆಡೆ ಶಾಂತಿ ಮಾತುಕತೆಯಲ್ಲಿ ನಿರತವಾಗಿದ್ದರೆ, ಮತ್ತೊಂದೆಡೆ ಆಫ್ಘನ್‌ ತಾಲಿಬಾನ್‌ಗಳ ಜತೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಏ.1ರಿಂದ ಜೂ.30ರ ಅವಧಿಯಲ್ಲಿ ಪಾಕಿಸ್ತಾನ ಗಡಿಯಲ್ಲಿರುವ ಪ್ರದೇಶಗಳಲ್ಲಿ ಆಫ್ಘನ್‌ ತಾಲಿಬಾನಿಗಳಿಗೆ ಹಣದ ಕೊಡುಗೆ ಸಿಗುವುದು ಹೆಚ್ಚಾಗಿದೆ. ಹಿಂದೆಲ್ಲಾ ಮಸೀದಿಗಳಲ್ಲಿ ಮನವಿ ಮಾಡಿ ಉಗ್ರರು ಹಣ ಸಂಗ್ರಹಿಸುತ್ತಿದ್ದರು. ಈಗ ಪಾಕಿಸ್ತಾನದ ಪಟ್ಟಣಗಳಲ್ಲಿರುವ ಮಾರುಕಟ್ಟೆಪ್ರದೇಶಕ್ಕೆ ಹೋಗಿ ಹಣ ಸಂಗ್ರಹಿಸುತ್ತಿದ್ದಾರೆ. ಅಂಗಡಿ ಮಾಲೀಕರಿಂದ 3000 ರು. ಅಥವಾ ಅದಕ್ಕಿಂತ ಹೆಚ್ಚು ಹಣ ಪಡೆಯುತ್ತಿದ್ದಾರೆ. ಕ್ವೆಟ್ಟಾ, ಕುಚ್ಲಕ್‌ ಬೈಪಾಸ್‌, ಪಶ್ತೂನ್‌ ಅಬಾದ್‌, ಇಶಾಕ್‌ ಅಬಾದ್‌ ಹಾಗೂ ಫಾರೂಖಿಯಾದಲ್ಲಿ ಈ ಬೆಳವಣಿಗೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು