ಉತ್ತರ ಕಾಬೂಲ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಐಸಿಸ್ ಕೆ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ತಾಲಿಬಾನ್ ತಿಳಿಸಿದೆ.
ಸೋಮವಾರ ಅಫ್ಘಾನ್ ರಾಜಧಾನಿಯಲ್ಲಿ ಈದ್ ಗಾಹ್ ಮಸೀದಿಯ ಮೇಲೆ ಐಸಿಸ್ ಉಗ್ರರು ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ತಾಲಿಬಾನ್ ಕಾರ್ಯಾಚರಣೆ ನಡೆಸಿದೆ.
ಐಸಿಸ್ ಉಗ್ರರು ಅಡಗಿರುವ ಬಗ್ಗೆ ತಾಲಿಬಾನ್ ಮಾಹಿತಿ ಪಡೆದು ಈ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯರಿಗೆ ಭಾರೀ ಶಸ್ತ್ರಾಸ್ತ್ರಗಳ ಗುಂಡಿನ ಸದ್ದು ಕೂಡ ಕೇಳಿಸಿದೆ.
ಐಸಿಸ್ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 10 ಮಂದಿ ಬಲಿಯಾಗಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.