News Karnataka Kannada
Saturday, April 27 2024
ವಿದೇಶ

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲಿಗೆ ಐವರು ಬಲಿ

File Photo: Afghanistan's President Ashraf Ghani Speaks During His Inauguration As President, In Kabul
Photo Credit :

ಕಾಬೂಲ್: ಅಫ್ಗಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗಿರುವ ಹಿನ್ನೆಲೆಯಲ್ಲಿ ಲೂಟಿ, ಹಿಂಸಾಚಾರ ಸಾಧ್ಯತೆಗೆ ಹೆದರಿ ಸಹಸ್ರಾರು ಮಂದಿ ದೇಶ ತೊರೆಯಲು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದು, ನೂಕುನುಗ್ಗಲಿಗೆ ಕಾರಣವಾಯಿತು. ಈ ವೇಳೆ ಐವರು ಮೃತಪಟ್ಟಿದ್ದಾರೆ.
ಜನರನ್ನು ನಿಯಂತ್ರಿಸಲು ಗುಂಡು ಹಾರಿಸಿದ್ದರಿಂದ ಇದು ಸಂಭವಿಸಿದೆಯೋ ಅಥವಾ ಕಾಲ್ತುಳಿತದಿಂದಲೋ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಏರ್‌ಪೋರ್ಟ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಅಸಂಖ್ಯಾತ ಪ್ರಯಾಣಿಕರನ್ನು ನಿಯಂತ್ರಿಸಲು ಭದ್ರತಾಪಡೆಗಳು ಮತ್ತು ಏರ್‌ಪೋರ್ಟ್ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಜನಸಾಗರವೇ ಹರಿದುಬರುತ್ತಿದ್ದು, ಈಗಾಗಲೇ ಅಲ್ಲಿರುವ ಅಸಂಖ್ಯಾತ ಜನರೊಂದಿಗೆ ಸೇರ್ಪಡೆಯಾಗುತ್ತಿರುವ ಸಂಖ್ಯೆ ಏರುತ್ತಲೇ ಇದೆ.ದೇಶದ ಅಧ್ಯಕ್ಷ ಅಶ್ರಫ್ ಘನಿ ಅವರ ಅರಮನೆಯನ್ನು ತಾನಿಬಾನ್ ಬಂಡುಕೋರರು ವಶಕ್ಕೆ ತೆಗೆದುಕೊಂಡ ನಂತರ ಮತ್ತಷ್ಟು ಭಯಭೀತರಾಗಿರುವ ಜನರು ದೇಶ ತೊರೆಯಲು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಅವ್ಯವಸ್ಥೆ, ಗೊಂದಲಗಳಿಂದಾಗಿ ಕೆಲವು ಮಾರ್ಗದ ವಿಮಾನಗಳು ರದ್ದಾಗಿವೆ.
ಏರ್‌ಪೋರ್ಟ್‌ನಲ್ಲಿ 1000 ಕ್ಕೂ ಹೆಚ್ಚು ಅಮೆರಿಕ ಯೋಧರು ಭದ್ರತೆಗಾಗಿ ನಿಯೋಜಿತರಾಗಿದ್ದಾರೆ. ಉದ್ರಿಕ್ತ ಜನರನ್ನು ನಿಯಂತ್ರಿಸಲು ಏರ್‌ಪೋರ್ಟ್‌ನಲ್ಲಿ ಗುಂಡು ಹಾರಿಸಿರುವ ಘಟನೆಯೂ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು