ಬೆಂಗಳೂರು: ಮೈಸೂರು, ಮಡಿಕೇರಿ ಸೇರಿದಂತೆ ರಾಜ್ಯದ ಆರು ಪ್ರಮುಖ ನಗರಗಳ ನಡುವೆ ಶೀಘ್ರವೇ ಕೆಎಸ್ಆರ್ಟಿಸಿಯ 50 ಐಷಾರಾಮಿ ಎಲೆಕ್ಟ್ರಿಕ್ ಬಸ್ಗಳು (ಇ-ವಾಹನಗಳು) ಸಂಚರಿಸಲಿವೆ. ಏರಿಕೆಯಾಗುತ್ತಿರುವ ಡೀಸೆಲ್ ದರಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಸಾರಿಗೆ ಸಂಸ್ಥೆಗೆ ಇದರಿಂದ ಕೊಂಚಮಟ್ಟಿಗೆ ನಿರಾಳವಾಗಲಿದೆ.
ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ನಗರಗಳ ನಡುವೆ ಇಂಟರ್ ಸಿಟಿ ಮಾರ್ಗಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗುರುತಿಸಿದೆ. 50 ಸಂಪೂರ್ಣ ಹವಾ ನಿಯಂತ್ರಿತ ಇ-ಬಸ್ಗಳಲ್ಲಿ ತಲಾ 43 ಆಸನಗಳಿರುತ್ತವೆ.ಹನ್ನೆರಡು ಮೀಟರ್ ಉದ್ದದ ಬಸ್ನ ಎಲೆಕ್ಟ್ರಿಕ್ ಬ್ಯಾಟರಿಯನ್ನು ಒಮ್ಮೆ ಚಾರ್ಚ್ ಮಾಡಿದರೆ 250 ರಿಂದ 300 ಕಿ.ಮೀ.ವರೆಗೆ ವಾಹನ ಚಲಿಸುತ್ತದೆ. ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ (ಒಜಿಎಲ್) ಇದರ ನಿರ್ವಹಣೆಗಾಗಿ ಕೆಎಸ್ಆರ್ಟಿಸಿಯಿಂದ 12 ವರ್ಷಗಳ ಗುತ್ತಿಗೆ ಪಡೆದಿದೆ.
ರಾಜ್ಯ ಸಾರಿಗೆ ಸಂಸ್ಥೆಗೆ ಈಗ 88 ರೂ.ಗಳಿಗೆ ಡೀಸೆಲ್ ಲಭಿಸುತ್ತಿದೆ. ಹೈಟೆಕ್ ವೋಲ್ವೊ ಬಸ್ಗಳ ಕಾರ್ಯನಿರ್ವಹಣಾ ವೆಚ್ಚ ಪ್ರತಿ ಕಿ.ಮೀ.ಗೆ 52 ರೂ.ಗಳು. ಡಿಸೇಲ್ ದರ ದಿನೇ ದಿನೇ ಹೆಚ್ಚಾಗುತ್ತಿದ್ದು, ಕೆಎಸ್ಆರ್ಟಿಸಿ ಸಂಕಷ್ಟಕ್ಕೆ ಸಿಲುಕಿದೆ. ವೆಚ್ಚ ಕಡಿವಾಣದ ತುರ್ತು ಅಗತ್ಯ ಸಂದರ್ಭದಲ್ಲಿ ಎಲೆಕ್ಟ್ರಿಕ್ ಬಸ್ಗಳು ನೆರವಾಗುತ್ತವೆ. ದೀರ್ಘ ಅಂತರದ ಸಂಚಾರಕ್ಕೆ ವಿದ್ಯುತ್ ಬಸ್ಗಳನ್ನು ಓಡಿಸುವುದು ಲಾಭದಾಯಕ ಎಂದು ಸಂಸ್ಥೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಮೈಸೂರು ,ಮಡಿಕೇರಿಗೆ ವಿದ್ಯುತ್ ಬಸ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.