ಕಾಬೂಲ್: ಅಮೆರಿಕದ ನಾಗರಿಕರೂ ಸೇರಿ ಸುಮಾರು 200 ಪ್ರಯಾಣಿಕರು ಕತಾರ್ ಏರ್ವೇಸ್ನ ವಿಮಾನದಲ್ಲಿ ಗುರುವಾರ ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಟರು.
ಆ.31ರಂದು ಅಮೆರಿಕ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ಅಫ್ಗನ್ನಿಂದ ವಿದೇಶಿಯರನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಅಫ್ಗಾನಿಸ್ತಾನ ಮತ್ತು ಅಮೆರಿಕದ ಪೌರತ್ವ ಹೊಂದಿರುವ ವ್ಯಕ್ತಿಯೊಬ್ಬರು ತಮ್ಮ ಕುಟುಂಬದ ಜೊತೆ ವಿಮಾನ ಏರಲು ಕಾಯುತ್ತಿದ್ದರು. ಅಮೆರಿಕ ವಿದೇಶಾಂಗ ಸಚಿವಾಲಯದಿಂದ ತಮಗೆ ಬೆಳಿಗ್ಗೆ ಕರೆ ಬಂದಿತ್ತು ಎಂದು ಅವರು ಹೇಳಿದರು.
13 ಜನ ಡಚ್ಛರು ಅಫ್ಗನ್ನಲ್ಲಿ ಉಳಿದಿದ್ದರು. ಅವರು ಕೂಡಾ ವಿಮಾನ ಏರಿದ್ದಾರೆ. ಇದಕ್ಕಾಗಿ ಡಚ್ ವಿದೇಶಾಂಗ ಸಚಿವ ಸಿಗ್ರಿದ್ ಕಾಗ್, ಕತಾರ್ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.