ಅಮೆರಿಕ: ಐಸಿಸ್ ಉಗ್ರರು ಕಾಬೂಲ್ನ ಹಮೀದ್ ಕರ್ಜೈ ವಿಮಾನ ನಿಲ್ದಾಣದ ಹೊರಗೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ13 ಅಮೆರಿಕನ್ ಯೋಧರು ಮೃತಪಟ್ಟಿರುವುದಾಗಿ ಪೆಂಟಗನ್ ಹೇಳಿದೆ.
ದಾಳಿಯಲ್ಲಿ 18 ಯೋಧರು ಗಾಯಗೊಂಡಿದ್ದು, ಐಸಿಎಸ್ ಉಗ್ರರ ಇತ್ತೀಚಿನ ಭೀಕರ ದಾಳಿ ಇದಾಗಿದೆ ಎಂದು ಪೆಂಟಗನ್ ಹೇಳಿದೆ.
ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಭದ್ರತೆಗೆ ಅಮೆರಿಕ ಯೋಧರನ್ನು ನಿಯೋಜಿಸಲಾಗಿತ್ತು. ಈ ವೇಳೆ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ನ ಕಮಾಂಡರ್ ಜನರಲ್ ಕೆನೆತ್ ಫ್ರಾಂಕ್ಲಿನ್ ಮೆಕೆಂಜಿ ವರದಿಗಾರರಿಗೆ ತಿಳಿಸಿದ್ದಾರೆ.
ಕೆಲವು ಗಂಟೆಗಳ ಹಿಂದಷ್ಟೇ ಬೆದರಿಕೆಯಾಗಿದ್ದು, ಇದೀಗ ನೈಜ ದಾಳಿಯೇ ನಡೆದುಹೋಗಿದೆ. ವಿಮಾನ ನಿಲ್ದಾಣದ ಹೊರಭಾಗದ ಭದ್ರತೆ ಹೊತ್ತಿರುವ ತಾಲಿಬಾನಿಗಳನ್ನು ಸಂಪರ್ಕಿಸುತ್ತಿದ್ದೇವೆ. ಈ ಒತ್ತಡದ ನಡುವೆಯೂ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.