News Karnataka Kannada
Friday, May 03 2024
ದೇಶ

ಸಿಸಿಟಿವಿ ಅಳವಡಿಕೆ, ವಿಶ್ವದಲ್ಲೇ ದೆಹಲಿ ನಂ.1

Delhi
Photo Credit :
ನವದೆಹಲಿ : ಸಿಸಿಟಿವಿ ಅಳವಡಿಸುವಲ್ಲಿ ರಾಷ್ಟ್ರ  ರಾಜಧಾನಿ ದೆಹಲಿ ಈಗ ಲಂಡನ್, ಶಾಂಘೈ, ನ್ಯೂಯಾರ್ಕ್ ಮತ್ತು ಸಿಂಗಾಪುರದಂತಹ ನಗರಗಳನ್ನು ಮೀರಿಸಿದ್ದು, ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.

ಅಂತಾರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಗೊಂಡ ವಿಶ್ಲೇಷಣೆಯನ್ನು ಉಲ್ಲೇಖಿಸಿದ ದೆಹಲಿ ಸಿಎಂ, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಚದರ ಮೈಲಿಗೆ ಸಿಸಿಟಿವಿಗಳನ್ನು ಸ್ಥಾಪಿಸಲಾಗಿದೆ ಎಂದರು.

ಪ್ರಪಂಚದಾದ್ಯಂತದ 150 ನಗರಗಳ ವಿಶ್ಲೇಷಣೆಯಲ್ಲಿ, ದೆಹಲಿ ಜಾಗತಿಕವಾಗಿ ಗರಿಷ್ಠ ಸಿಸಿಟಿವಿ ವ್ಯಾಪ್ತಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿ ಎಲೆಕ್ಟ್ರಾನಿಕ್ ಕಣ್ಗಾವಲು ಜಾಲವು ಪ್ರತಿ ಚದರ ಮೈಲಿಗೆ 1,826 ಕ್ಯಾಮೆರಾಗಳನ್ನು ಸ್ಥಾಪಿಸಿದೆ, ಲಂಡನ್ 1,138, ಚೆನ್ನೈ 609, ಶೆನ್ಜೆನ್ (ಚೀನಾ) 520, ವುಕ್ಸಿ (ಚೀನಾ) 472, ಕ್ವಿಂಗ್‌ಡಾವೊ (ಚೀನಾ) 415, ಶಾಂಘೈ (ಚೀನಾ) 408, ಸಿಂಗಾಪುರ 387, ಚಾಂಗ್ಶಾ(ಚೀನಾ) 353 ಮತ್ತು ವುಹಾನ್ (ಚೀನಾ) 339 ಸಿಸಿಟಿವಿಗಳನ್ನು ಅಳವಡಿಸಿವೆ.

ಪ್ರತಿ ಚದರ ಮೈಲಿಗೆ ಅತಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ನಗರಗಳ ಪೈಕಿ ದೆಹಲಿಯು ಶಾಂಘೈ, ನ್ಯೂಯಾರ್ಕ್ ಹಾಗೂ ಲಂಡನ್‌ಗಳಂತಹ ಮಹಾ ನಗರಗಳನ್ನು ಹಿಂದಿಕ್ಕಿರುವ ಬಗ್ಗೆ ಹೆಮ್ಮೆಯಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಈ ಮೈಲಿಗಲ್ಲು ಸಾಧಿಸಲು ನೆರವಾದ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳಿಗೆ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದು ಸಿಎಂ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು