News Karnataka Kannada
Sunday, May 19 2024
ವಿದೇಶ

ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡೆನ್ ಅಧಿಕೃತ ಆಯ್ಕೆ

Photo Credit :

ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡೆನ್ ಅಧಿಕೃತ ಆಯ್ಕೆ

ವಾಷಿಂಗ್ಟನ್‌: ಅಮೆರಿಕದ ಹೊಸ ಅಧ್ಯಕ್ಷರಾಗಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಮತ್ತು ಉಪಾಧ್ಯಕ್ಷರನ್ನಾಗಿ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರನ್ನು ಅಮೆರಿಕದ ‘ಎಲೆಕ್ಟೊರಲ್‌ ಕಾಲೇಜ್‌’ ಸೋಮವಾರದಂದು ಅಧಿಕೃತವಾಗಿ ಆಯ್ಕೆ ಮಾಡಿದೆ.

ನವೆಂಬರ್ 3ರಂದು ಚುನಾವಣೆ ನಡೆದಿದ್ದು ಇದರಲ್ಲಿ ಆಯ್ಕೆಯಾಗಿದ್ದ ವಿವಿಧ ರಾಜ್ಯಗಳ ಎಲೆಕ್ಟೊರಲ್‌ ಕಾಲೇಜ್‌ ಸದಸ್ಯರು ಸೋಮವಾರ ಸಂವಿಧಾನದ ನಿಯಮಾನುಸಾರ ಮತ್ತು ಒಕ್ಕೂಟ ವ್ಯವಸ್ಥೆಯ ಕಾನೂನಿಗೆ ಅನುಗುಣವಾಗಿ ಅಧ್ಯಕ್ಷರನ್ನ ಆಯ್ಕೆ ಮಾಡಿದರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ವಾದಿಸುತ್ತಾ ಬಂದಿದ್ದ ಡೊನಾಲ್ಡ್‌ ಟ್ರಂಪ್‌ ಅವರ ಹೋರಾಟಕ್ಕೆ ಇದೀಗ ಫುಲ್ ಸ್ಟಾಪ್ ಇಟ್ಟಂತೆ ಆಗಿದೆ.

‘ಎಲೆಕ್ಟೊರಲ್‌ ಕಾಲೇಜ್‌’ ಸಭೆ ಕೇವಲ ಔಪಚಾರಿಕ ಪ್ರಕ್ರಿಯೆ ಆದರೆ, ಚುನಾವಣೆ ಅಕ್ರಮ ನಡೆದಿದೆ ಎನ್ನಲಾದ ಬಗ್ಗೆ ಟ್ರಂಪ್ ಆರೋಪ ಮಾಡಿದ ಹಿನ್ನೆಲೆಯಲ್ಲಿ ಎಲೆಕ್ಟೊರ್‌ ಸಭೆ ವಿಶ್ವದ ಗಮನ ಸೆಳೆದಿತ್ತು.

ಅಮೆರಿಕದಲ್ಲಿ 50 ರಾಜ್ಯಗಳಿಂದ 538 ಎಲೆಕ್ಟೊರಲ್‌ ಕಾಲೇಜು ಮತಗಳಿವೆ ಅಧ್ಯಕ್ಷ ಸ್ಥಾನ ಅಲಂಕರಿಸಲು ಕನಿಷ್ಟ 270 ಸ್ಥಾನಗಳನ್ನು ಗೆಲ್ಲಬೇಕು. ಅದರೆ ಜೋ ಬೈಡನ್‌ ಅವರು 306 ಮತಗಳನ್ನು ಪಡೆದು ಗದ್ದುಗೆ ಏರಲು ಸಿದ್ಧರಾಗಿದ್ದಾರೆ.

ಜೋ ಬೈಡನ್ ಅವರು ಈ ಹಿಂದೆ ಬರಾಕ್ ಒಬಾಮ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದು, ಪ್ರಸ್ತುತ ಜನವರಿ 20 ರಂದು ಅಮೆರಿಕದ 46 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

204

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು