News Karnataka Kannada
Thursday, May 09 2024
ವಿದೇಶ

ಅಫ್ಘಾನಿಸ್ತಾನದಲ್ಲಿ ಕಾರು ಬಾಂಬ್ ಸ್ಫೋಟ; ಕನಿಷ್ಠ ಎಂಟು ಮಂದಿ ಸಾವು

Photo Credit :

ಅಫ್ಘಾನಿಸ್ತಾನದಲ್ಲಿ ಕಾರು ಬಾಂಬ್ ಸ್ಫೋಟ; ಕನಿಷ್ಠ ಎಂಟು ಮಂದಿ ಸಾವು

ಅಫ್ಘಾನಿಸ್ತಾನ: ಪ್ರಬಲ ಕಾರು ಬಾಂಬ್ ಸ್ಫೋಟ ಸಂಭವಿಸಿದ್ದು , ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು , 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರವ ಘಟನೆ ಹೆರಾತ್ ಪ್ರಾಂತ್ಯದಲ್ಲಿ ಘಟಿಸಿದೆ .

ಶುಕ್ರವಾರ ತಡರಾತ್ರಿ ಸಂಭವಿಸಿದ ಸ್ಫೋಟದಲ್ಲಿ 14 ಮನೆಗಳು ನಾಶವಾಗಿವೆ . ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಪ್ರಾಂತೀಯ ಆಸ್ಪತ್ರೆಯ ವಕ್ತಾರ ರಫೀಕ್ ಶೆರ್ಣೈ ತಿಳಿಸಿದ್ದಾರೆ . ಮೃತಪಟ್ಟವರಲ್ಲಿ ಒಬ್ಬರು ಮತ್ತು ಗಾಯಗೊಂಡವರಲ್ಲಿ 11 ಮಂದಿ ಅಫ್ಘಾನ್ ಭದ್ರತಾ ಪಡೆಗಳ ಸಿಬ್ಬಂದಿಯಾಗಿದ್ದು , ಉಳಿದವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರು ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಏರಿಯನ್‌ ಹೇಳಿದ್ದಾರೆ .

ಕಾಬೂಲ್ ನಲ್ಲಿನ ಅಧಿಕಾರಿಗಳು ಶನಿವಾರ ಈ ಮಾಹಿತಿ ನೀಡಿದ್ದು , ಈವರೆಗೆ ಯಾವುದೇ ಸಂಘಟನೆ ಸ್ಫೋಟದ ಹೊಣೆ ಹೊತ್ತಿಲ್ಲ ಎಂದು ತಿಳಿಸುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು