Showing 20 of 3348 posts • Page 46 of 168
ಬೆಂಗಳೂರು- ಮಾಡ್ಗಾಂವ್ ಮಾರ್ಗದಲ್ಲಿ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲು ಕೆಲ ಲಾಬಿ ನಡೆಯುತ್ತಿದೆ. ಮಂಗಳೂರಿನ ಸಿಟಿ ಒಳಗೆ ರೈಲು ಸಂಚಾರ ಮಾಡುವಂತೆ ಒತ್ತಡ ತರಲಾಗುತ್ತಿದ್ದು, ಇದರಿಂದ ರೈಲಿನ ಸಂಚಾರದಲ್ಲಿ ಬಹಳಷ್ಟು ವಿಳಂಬವಾಗಲಿದೆ. ದೂರದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆ ಆಗಲಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್ ತಿಳಿಸಿದರು.
ಹಾಲು ಉತ್ಪಾದಕರ ಸಂಘದಲ್ಲಿ ಈ ಹಿಂದೆ ಕಳಪೆ ಗುಣಮಟ್ಟದ ಹಾಲನ್ನು ಸ್ವೀಕರಿಸದೆ ತಿರಸ್ಕಾರ ಮಾಡಲಾಗುತ್ತಿತ್ತು. ಮುಂದಿನ ಹಂತದಲ್ಲಿ ಕೆಳಪೆ ಗುಣಮಟ್ಟದ ಹಾಲನ್ನು ಕೂಡ ಸ್ವೀಕರಿಸಲು ಸಂಘದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಅವರಿಗೆ ಸರಕಾರದ 5ರೂ. ಅನುದಾನ ಇರುವುದಿಲ್ಲ ಹಾಗೂ ದರದಲ್ಲಿಯೂ ವ್ಯಾತ್ಯಾಸ ಇರುತ್ತದೆ ಎಂದು ದ.ಕ ಹಾಲು ಸಹಕಾರಿ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
‘ಕಿಸಾನ್ ಸಭಾ’ ಸಭಾಂಗಣದ ಉದ್ಘಾಟನೆ ಹಾಗೂ ಕುಕ್ಕುಂದೂರಿನ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ಸಂಭ್ರಮೋತ್ಸವದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಕಳಕ್ಕೆ ಆಗಮಿಸಿದರು.
ಶ್ರೀ ಜನಾರ್ದನ ಕಂಬಳ ವತಿಯಿಂದ ದಾನಿಗಳ ಸಹಕಾರದೊಂದಿಗೆ ಪ್ರಥಮ ವರ್ಷದ ಹೊನಲು ಬೆಳಕಿನ “ಎರ್ಮಾಳು ತೆಂಕ- ಬಡಾ ಜೋಡುಕರೆ ಕಂಬಳ” ಇದೇ ಫೆ. 28ರಂದು ಎರ್ಮಾಳು ಬಡಕೊಟ್ಟು ಬಾಕುಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ತಿಳಿಸಿದರು.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ರಾಹುಲ್ನಗರದ ವೀರ ಮಾರುತಿ ಭಜನಾ ಮಂದಿರ ಬಳಿ ಪಾರ್ಕ್ ಮಾಡಿದ್ದ ಪಲ್ಸರ್ ಬೈಕ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು ಕೇವಲ 11ಗಂಟೆಗಳಲ್ಲಿ ಇಬ್ಬರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡೂರು ಪೇಟೆಯಲ್ಲಿ ಕಟಿಂಗ್ ಶಾಪ್ನಲ್ಲಿ ನಡೆದ ಘಟನೆಯನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಪ್ರಚೋದನೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆದಿಮ ಕಲಾ ಟ್ರಸ್ಟ್ (ರಿ.), ಉಡುಪಿ, ತನ್ನ ಮೊದಲ ವಾರ್ಷಿಕೋತ್ಸವದ ಸವಿನೆನಪಿಗಾಗಿ ಪ್ರಖ್ಯಾತ ಭಾರತೀಯ ಪುರಾತತ್ವ ವಿದ್ವಾಂಸ ಡಾ. ರವೀಂದ್ರ ಕೋರಿಸೆಟ್ಟರ್ ರವರಿಗೆ, ಆದಿಮ ಕಲಾ ರತ್ನ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಅತ್ಯಂತ ಸಂತೋಷ ಮತ್ತು ಸಂಭ್ರಮದಿಂದ ಕೊಡಮಾಡುತ್ತಿದೆ. ಈ ಪ್ರಶಸ್ತಿಯು ರೂ.25.000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ಉಡುಪಿಯಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರವನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು.
ಕಾಪು ತಾಲೂಕು ಕಟಪಾಡಿ ಏಣಗುಡ್ಡೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಮೂಲತಃ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ದೀಪ ಸುರೇಶ ಲಮಾಣಿ (20) ಎನ್ನುವ ಯುವತಿಯು ಫೆಬ್ರವರಿ 20 ರಂದು ಕಾಲೇಜಿಗೆ ರಜೆ ಮಾಡಿ ಮನೆಯಿಂದ ಹೊರ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ ಯೋಜನೆ)ಯ ಹೆಸರು ಬದಲಾವಣೆ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗಷ್ಟೇ ಕರಾವಳಿಯ ಅತ್ಯಂತ ಹಿಂದುಳಿದ ಸಮುದಾಯವಾದ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿ, ಕೊರಗ ಬಂಧುಗಳೊಂದಿಗೆ ಊಟೋಪಚಾರ, ಸಂವಾದ ನಡೆಸಿ ಸುದ್ದಿಯಾಗಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಇದೀಗ ಎಸ್ಸಿ ಕಾಲನಿಯಲ್ಲಿ ಸಹಭೋಜನ ನಡೆಸಿದ್ದಾರೆ.
ಸುಳಗೋಡು ಶಾಲೆಯಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ಶಿಬಿರಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಕಾಲೇಜು ಬಸ್, ಹಳ್ಳಿಹೊಳೆ ಗ್ರಾಮದ ಶೆಟ್ಟಿಪಾಲು ಬಳಿ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ.
ರಾಜ್ಯದಲ್ಲಿ ಪವರ್ ಶೇರಿಂಗ್ ವಿವಾದ ವಿಚಾರವಾಗಿ ಮಾಜಿ ಸಿಎಂ ಎಂ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದರು. ಜನರಿಗೆ ಒಳ್ಳೆಯ ಸರಕಾರ ಬೇಕು. ಭ್ರಷ್ಟಾಚಾರ ರಹಿತ ಸದೃಢ ಸರಕಾರ ಬೇಕು. ಗ್ಯಾರಂಟಿ ಕಾರ್ಯಕ್ರಮಗಳಿಂದ ಬಡವರಿಗೆ ಅನುಕೂಲವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಹಸಿವು ಮುಕ್ತ ಮಾಡಿದೆ ಎಂದರು.
ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ‘ಕಿಸಾನ್ ಸಭಾ’ ಸಭಾಂಗಣದ ಉದ್ಘಾಟನೆ ಹಾಗೂ ಕುಕ್ಕುಂದೂರಿನ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ಸಂಭ್ರಮೋತ್ಸವ ಇದೇ ಫೆ. 25ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ತಿಳಿಸಿದರು.
ನಕಲಿ ಹುಲಿ ಉಗುರುಗಳನ್ನು ಅಸಲಿ ಎಂದು ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಉಡುಪಿ ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ.
ಕರಾವಳಿ ಭಾಗದಲ್ಲಿ ಬೆಳೆಯುವ ಬಾಳೆ ಎಲೆಗಳಿಗೆ ನೆರೆಯ ಕೇರಳ ರಾಜ್ಯದಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ವಿಶೇಷವಾಗಿ ಹಬ್ಬ -ಜಾತ್ರೆ, ಮದುವೆ ಸಮಾರಂಭ ಮತ್ತು ದೇವಸ್ಥಾನಗಳ ಅನ್ನಸಂತರ್ಪಣೆ ಕಾರ್ಯಕ್ರಮ ಗಳ ಸಂದರ್ಭಗಳಲ್ಲಿ ಕೇರಳದ ವ್ಯಾಪಾರಿಗಳು ಕರಾವಳಿಯತ್ತ ಮುಖ ಮಾಡುತ್ತಿದ್ದಾರೆ.
ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹುಚ್ಚಾಟ ಮೆರೆದ ಯುವಕನನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿ ಕಲ್ಸಂಕ ಜಂಕ್ಷನ್ ನಲ್ಲಿ ನಡೆದಿದೆ.
ಅರಣ್ಯ ಇಲಾಖೆ ಇರಿಸಿದ ಬೋನಿಯಲ್ಲಿ ಚಿರತೆಯೊಂದು ಸೆರೆಯಾದ ಘಟನೆ ಭಾನುವಾರ ಬೆಳಗ್ಗಿನ ಜಾವ ಮಣಿಪುರ ಗ್ರಾಮದ ಕುಂತಲನಗರದ ದೇವಳಗುಜ್ಜಿ ಎಂಬಲ್ಲಿ ನಡೆದಿದೆ.
1848 ರಲ್ಲಿ ಕಾರ್ಲ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಎಂಗೆಲ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆ ಬಿಡುಗಡೆಯ ನೆನಪಿನಲ್ಲಿ ಜಗತ್ತಿನಾದ್ಯಂತ ಕೆಂಪು ಪುಸ್ತಕ ದಿನಾಚರಣೆ ನಡೆಸಲಾಗುತ್ತಿದೆ. ಇದು ಜಗತ್ತಿನಲ್ಲಿ ಬೈಬಲ್ ನಂತರದಲ್ಲಿ ಅತೀ ಹೆಚ್ಚು ಮುದ್ರಣ ಕಂಡು ಜಗತ್ತಿನ ವಿವಿಧ ಭಾಷೆಗಳಲ್ಲಿ ಮುದ್ರಿಸಿ ದಾಖಲೆ ಮಾಡಿದ ಮೇರುಕೃತಿ ಆಗಿದೆ ಎಂದು ಪ್ರಗತಿಪರ ಚಿಂತಕರಾದ ಫಣಿರಾಜ್ ಅವರು ಹೇಳಿದರು.
ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ ಕರ್ನಾಟಕ ದಕ್ಷಿಣ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ನಗರದ ಜೋಡುಕಟ್ಟೆಯ ಬಳಿ ಪ್ರತಿಭಟನೆ ನಡೆಸಿ ಬಳಿಕ ರಸ್ತೆತಡೆ ನಡೆಸಲಾಯಿತು.