ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೆಂಗಳೂರಿನ ಸಹಸ್ರ ಕಂಠ ಗಾಯನ ಸೇವಾ ಸಮಿತಿ ವತಿಯಿಂದ ದಾಸ ನಮನ ಕಾರ್ಯಕ್ರಮವು ನಡೆಯಿತು.

ಅಪಾರ ಸಂಖ್ಯೆಯ ಭಕ್ತರು ಸಾಮೂಹಿಕವಾಗಿ ದಾಸರ ಪದಗಳನ್ನು ಹಾಡಿದರು. ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ನಡೆಯಿತು.

ಪುತ್ತಿಗೆ ಮಠದ ಹಿರಿಯ ಶ್ರೀಪಾದರು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹ ಸಂದೇಶ ನೀಡಿದರು. ಅಪಾರ ಸಂಖ್ಯೆಯ ಭಕ್ತರು ಈ ದಾಸ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.