Bengaluru 21°C
Ad

ಯುವಕರ ರೀಲ್ಸ್ ಹುಚ್ಚಿಗೆ ಎರಡು ಮಹೀಂದ್ರ ಥಾರ್ ಸಮುದ್ರ ಪಾಲು; ವಿಡಿಯೋ ವೈರಲ್‌

New Project (2)

ಕಚ್: ರೀಲ್ಸ್ ಗೀಳಿಗೆ ಯುವಕರು ದುಬಾರಿ ದಂಡ ತೆತ್ತಿದ ಘಟನೆ ಗುಜರಾತ್‌ನ ಕಚ್ ಜಿಲ್ಲೆಯ ಭದ್ರೇಶ್ವರ ಕಡಲ ತೀರದಲ್ಲಿ ನಡೆದಿದೆ. ಯುವಕರು ಎರಡು ಮಹೀಂದ್ರ ಥಾರ್ ಜೀಪ್‌ನ್ನು ಸಮುದ್ರಕ್ಕಿಳಿಸಿ ರೀಲ್ಸ್ ಮಾಡಿದ್ದಾರೆ. ಆದರೆ ಸಮುದ್ರದಲ್ಲಿ ಅಲೆಗಳ ಪ್ರಮಾಣ ಹೆಚ್ಚಾಗಿದೆ. ರಭಸವಾಗಿ ಅಪ್ಪಳಿಸಿದ ಅಲೆಗಳಿಂದ ಜೀಪ್ ನೀರುಪಾಲಾದ ಘಟನೆ ನಡೆದಿದೆ.

ಯುವಕರು ತಮ್ಮ ಮಹೀಂದ್ರ ಥಾರ್ ಜೀಪನ್ನು ಸಮುದ್ರಕ್ಕಿಳಿಸಿ ಅಪಾಯಕಾರಿ ಸ್ಟಂಟ್‌ಗೆ ಮುಂದಾಗಿದ್ದಾರೆ. ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಯುವಕರು ಈ ಸಾಹಸ ಮಾಡಿದ್ದಾರೆ. ಸಮುದ್ರಕ್ಕಿಳಿಸಿದ ಜೀಪ್‌ನಲ್ಲಿ ಕುಳಿತು ರೀಲ್ಸ್ ಮಾಡುತ್ತಿದ್ದಂತೆ ಸಮುದ್ರದ ಅಲೆಗಳ ರಭಸ ಹೆಚ್ಚಾಗಿದೆ. ಇದರಿಂದ ಥಾರ್ ಜೀಪ್ ಸಮುದ್ರತ್ತ ಜಾರಿದೆ.

ಜೀಪ್ ಸ್ಟಾರ್ಟ್ ಮಾಡಿ ಮರಳಿ ದಡಕ್ಕೆ ತರುವ ಪ್ರಯತ್ನವನ್ನು ಯುವಕರು ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಥಾರ್ ಸಮುದ್ರಪಾಲಾಗುತ್ತಿದ್ದಂತೆ ಸಾಹಯಕ್ಕಾಗಿ ಕೂಗಿದ್ದಾರೆ. ಸ್ಥಳೀಯರು ಆಗಮಿಸಿ ಥಾರ್ ಜೀಪ್ ದಡಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದಾರೆ.

ಥಾರ್ ಜೀಪ್‌ನ್ನು ದಡ ಸೇರಿಸಿದ್ದಾರೋ ಅನ್ನೋ ಕುರಿತು ಮಾಹಿತ ಲಭ್ಯವಾಗಿಲ್ಲ. ಆದರೆ ಯುವಕರ ರೀಲ್ಸ್ ಹುಚ್ಚಾಟಕ್ಕೆ ಮಹೀಂದ್ರ ಥಾರ್ ಜೀಪನ್ನು ಬಳಸಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಅತ್ತ ಜೀಪ್‌ನ್ನು ಮರಳಿ ದಡ ಸೇರಿಸಲು ಸಾಧ್ಯವಾಗದೆ, ಇತ್ತ ಪ್ರಯತ್ನ ಮಾಡಲು ಸಾಧ್ಯವಾಗದೆ ಯುವಕರು ಅಸಹಾಯಕಾರಿದ್ದಾರೆ.

ನೆರವಿಗೆ ಧಾವಿಸಿದ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹರಿದಾಡಿದೆ.

https://www.instagram.com/reel/C8AapmxsMMZ/?utm_source=ig_embed&utm_campaign=loading

Ad
Ad
Nk Channel Final 21 09 2023
Ad