Bengaluru 24°C
Ad

ಶಿಕ್ಷಕಿಗೆ ಗನ್ ತೋರಿಸಿ ಮದುವೆಗೆ ಯತ್ನಿಸಿದ ಪಾಗಲ್ ಪ್ರೇಮಿ; ವಿಡಿಯೋ ವೈರಲ್‌

Viral

ಪಾಟ್ನಾ: ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಟೀಚರ್ ಒಬ್ಬರನ್ನು ಅಡ್ಡಗಟ್ಟಿದ ಪಾಗಲ್ ಪ್ರೇಮಿ ಪಿಸ್ತೂಲ್ ತೋರಿಸಿ ಬೆದರಿಸಿದ್ದಾನೆ. ಬಳಿಕ ಹಣೆಗೆ ಸಿಂಧೂರ ಇಟ್ಟು ರಸ್ತೆಯಲ್ಲಿ ಮದುವೆಯಾಗಲು ಮುಂದಾಗಿದ್ದಾನೆ. ಆದರೆ ಟೀಚರ್ ತಂದೆಯ ಪ್ರಯತ್ನದಿಂದ ಭಾರಿ ಅನಾಹುತ ತಪ್ಪಿದೆ. ಈ ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ.

ಈ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬಳಿಕ ಟೀಚರ್ ದೂರು ದಾಖಲಿಸಿದ್ದಾರೆ. ಅಮರಪುರ್ ಬ್ಲಾಕ್‌ನಲ್ಲಿರುವ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಈಕೆ ತಂದೆ ಜೊತೆ ಮನೆಗೆ ಮರಳುತ್ತಿರುವಾಗ ಈ ಘಟನೆ ನಡೆದಿದೆ. ಶಾಲಾ ತರಗತಿ ಮುಗಿಸಿ ಸಂಜೆ ವೇಳೆ ತಂದೆ ಜೊತೆ ಮನೆಗೆ ಮರಳಿದ್ದಾರೆ. ಶಾಲೆಯಿಂದ ತಂದೆ ಸ್ಕೂಟರ್ ನಿಲ್ಲಿಸಿದ ಬಳಿಗೆ ನಡೆದುಕೊಂಡು ಬರುವಾಗ ಈ ಘಟನೆ ನಡೆದಿದೆ.

ಪಾಗಲ್ ಪ್ರೇಮಿಯ ಪ್ರಯತ್ನಕ್ಕೆ ಟೀಚರ್ ತಂದೆ ಪ್ರತಿರೋಧ ತೋರಿದ್ದಾರೆ. ನನ್ನ ಮಗಳನ್ನು ಮುಟ್ಟಲು ಬಿಡುವುದಿಲ್ಲ ಎಂದು ಗದರಿಸಿದ್ದಾರೆ. ಆಕೆಯಿಂದ ನಾನು ಹುಚ್ಚನಾಗಿದ್ದೇನೆ. ನಾನು ಮದುವೆಯಾಗುತ್ತೇನೆ ಎಂದು ರಾದ್ದಾಂತ ಶುರುಮಾಡಿದ್ದಾನೆ. ಇನ್ನು ಪಾಗಲ್ ಪ್ರೇಮಿಯನ್ನು ದೂರಕ್ಕೆ ತಳ್ಳಿ ಮಗಳ ಜೊತೆ ಪೊಲೀಸ್ ಠಾಣೆಗೆ ತೆರಳಿದ ತಂದೆ ದೂರು ನೀಡಿದ್ದಾರೆ.

https://x.com/i/status/1806237574983569460

Ad
Ad
Nk Channel Final 21 09 2023
Ad