Bengaluru 22°C
Ad

ಇನ್​ಸ್ಟಾದಲ್ಲಿ ಲಾಂಗ್ ಹಿಡಿದಿರೋ ವಿಡಿಯೋ ಪೋಸ್ಟ್ : ಇಬ್ಬರು ಕಿಡಿಗೇಡಿಗಳು ಅರೆಸ್ಟ್

ನಮ್ಮನ್ನು ನೋಡಿ ಜನ ಹೆದರಬೇಕೆಂದು ಇನ್​ಸ್ಟಾದಲ್ಲಿ ಲಾಂಗ್ ಹಿಡಿದಿರೋ ವಿಡಿಯೋ ಪೋಸ್ಟ್  ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಸಿನಿಮೀಯಾ ರೀತಿಯಲ್ಲಿ ಕಾರು ಅಡ್ಡಗಟ್ಟಿ ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಎನ್​ಆರ್ ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ನಡೆದಿದೆ.

ಚಿಕ್ಕಮಗಳೂರು: ನಮ್ಮನ್ನು ನೋಡಿ ಜನ ಹೆದರಬೇಕೆಂದು ಇನ್​ಸ್ಟಾದಲ್ಲಿ ಲಾಂಗ್ ಹಿಡಿದಿರೋ ವಿಡಿಯೋ ಪೋಸ್ಟ್  ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಸಿನಿಮೀಯಾ ರೀತಿಯಲ್ಲಿ ಕಾರು ಅಡ್ಡಗಟ್ಟಿ ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಎನ್​ಆರ್ ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ನಡೆದಿದೆ.

ಎನ್.ಆರ್ ಪುರ ಪಟ್ಟಣದ ಮೆಕ್ಯಾನಿಕ್ ಸೈಯದ್ ಸಲ್ಮಾನ್ (22), ಮೊಹಮ್ಮದ್ ಸಾಧಿಕ್ (25) ಬಂಧಿತ ಯುವಕರು. ನಮ್ಮನ್ನು ನೋಡಿ ಜನರು ಹೆದರಬೇಕೆಂದು ಈ ಇಬ್ಬರು ಲಾಂಗ್ ಅನ್ನು ತೋರಿಸುತ್ತಿದ್ದರು. ಜನರಿಗೆ ಹೆದರಿಕೆ ಬರೋ ರೀತಿ ತಲ್ವಾರ್ ಹಿಡಿದು ಸುತ್ತಾಡುತ್ತಿದ್ದರು. ಎಲ್ಲಿಗಾದರು ಕಾರಿನಲ್ಲಿ ಹೋಗುವಾಗ ಲಾಂಗ್​ಗಳ ಸಮೇತ ಹೋಗುತ್ತಿದ್ದರು.

ಈ ಸಂಬಂಧ ಸಾರ್ವಜನಿಕರ ಮಾಹಿತಿ ಮೇರೆಗೆ ಎನ್​.ಆರ್ ಪುರ ಠಾಣೆಯ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಕಾರಿನಲ್ಲಿ ಲಾಂಗ್​​ಗಳನ್ನ ಇಟ್ಟುಕೊಂಡು ಓಡಾಟ ನಡೆಸುವಾಗ ಪೊಲೀಸರು ಸಿನಿಮೀಯ ರೀತಿ ಕಾರನ್ನು ಅಡ್ಡ ಗಟ್ಟಿದ್ದಾರೆ. ಬಳಿಕ ಇಬ್ಬರನ್ನು ಬಂಧಿಸಿದ್ದಾರೆ.

Ad
Ad
Nk Channel Final 21 09 2023
Ad