Ad

ʼಕಲ್ಕಿ 2898 ADʼ ಸಿನಿಮಾವನ್ನು ಹಾಡಿ ಹೊಗಳಿದ ನಟ ಯಶ್‌

ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾದ 2024ರ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898AD ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತೀ ದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿದ್ದು,  ಈ ಸಿನಿಮಾದ ಬಗ್ಗೆ ಇದೀಗ ಯಶ್‌ ಕೂಡ ಸಿನಿಮಾ ಕುರಿತು ಹಾಡಿ ಹೊಗಳಿದ್ದಾರೆ.

ಬೆಂಗಳೂರು: ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾದ 2024ರ ಬಹು ನಿರೀಕ್ಷಿತ ಚಿತ್ರ ‘ಕಲ್ಕಿ 2898AD’ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತೀ ದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿದ್ದು,  ಈ ಸಿನಿಮಾದ ಬಗ್ಗೆ ಇದೀಗ ಯಶ್‌ ಕೂಡ ಸಿನಿಮಾ ಕುರಿತು ಹಾಡಿ ಹೊಗಳಿದ್ದಾರೆ.

Ad
300x250 2

ಶುಕ್ರವಾರ ಸಿನಿಮಾ ಬಗ್ಗೆ ಯಶ್ ಟ್ವೀಟ್‌ ಮಾಡಿ, “ಕಣ್ಣಿಗೆ ಹಬ್ಬವಾಗುವ ರೀತಿಯಲ್ಲಿ ಸೃಷ್ಟಿಸಿದ ‘ಕಲ್ಕಿ 2898AD’ ತಂಡಕ್ಕೆ ಅಭಿನಂದನೆಗಳು. ಈ ಚಿತ್ರವು ಹೆಚ್ಚು ಸೃಜನಶೀಲ ಕಥೆಯನ್ನು ಹೇಳಲು ದಾರಿ ಮಾಡಿಕೊಡುತ್ತದೆ. ನಾಗ್‌ ಅಶ್ವಿನ್‌ ಮತ್ತು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಸ್ಫೂರ್ತಿ ನೀಡಿದೆ.

ಡಾರ್ಲಿಂಗ್ ಪ್ರಭಾಸ್‌, ಅಮಿತಾಭ್‌, ದೀಪಿಕಾ, ಕಮಲ್‌ ಹಾಸನ್‌ ಹಾಗೇ ಕೆಲವು ಅತಿಥಿ ಪಾತ್ರಗಳನ್ನು ಒಟ್ಟಿಗೆ ನೋಡುವುದು ಒಂದು ಅದ್ಭುತ ಅನುಭವವಾಗಿದೆ. ಇಂಥಹಾ ಒಂದು ಅದ್ಭುತವಾದ ಸಿನಿಮಾವನ್ನು ಪ್ರೇಕ್ಷಕರ ಎದುರು ತಂದ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು, ಈ ಸಿನಿಮಾ ನಿಜಕ್ಕೂ ಬೆಳ್ಳಿತೆರೆಯನ್ನು ಬೆಳಗಿಸುತ್ತಿದೆ ಎಂದಿದ್ದಾರೆ.

https://x.com/TheNameIsYash/status/1806606356243451965?

 

 

 

Ad
Ad
Nk Channel Final 21 09 2023
Ad