Ad

2024ರ ಟಿ20 ವಿಶ್ವಕಪ್ ಗೆದ್ದು ಬೀಗಿದ ಟೀಂ ಇಂಡಿಯಾ.!

ಬಾರ್ಬಡೋಸ್‌ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆದ 2024ರ ಟಿ20 ವಿಶ್ವಕಪ್​​ ಫೈನಲ್ ಹೈವೋ​ಲ್ಟೇಜ್​ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಫೈನಲ್​​ನಲ್ಲಿ ಗೆದ್ದು ಟೀಮ್​ ಇಂಡಿಯಾ ಟಿ20 ವಿಶ್ವಕಪ್​​​ ಟ್ರೋಫಿಗೆ ಮುತ್ತಿಕ್ಕಿದೆ.

ಬಾರ್ಬಡೋಸ್‌ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆದ 2024ರ ಟಿ20 ವಿಶ್ವಕಪ್​​ ಫೈನಲ್ ಹೈವೋ​ಲ್ಟೇಜ್​ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಫೈನಲ್​​ನಲ್ಲಿ ಗೆದ್ದು ಟೀಮ್​ ಇಂಡಿಯಾ ಟಿ20 ವಿಶ್ವಕಪ್​​​ ಟ್ರೋಫಿಗೆ ಮುತ್ತಿಕ್ಕಿದೆ.

Ad
300x250 2

ಟೀಮ್​ ಇಂಡಿಯಾ ನೀಡಿದ ಬೃಹತ್​ ಟಾರ್ಗೆಟ್​ ಬೆನ್ನತ್ತಿದ ಸೌತ್​ ಆಫ್ರಿಕಾ ಆರಂಭದಲ್ಲೇ 2 ವಿಕೆಟ್​ ಕಳೆದುಕೊಂಡಿತ್ತು. ಕ್ರೀಸ್​ನಲ್ಲೇ ನಿಂತು ಇನ್ನಿಂಗ್ಸ್​ ಕಟ್ಟಿದ ಕ್ವಿಂಟನ್​ ಡಿ ಕಾಕ್​​​ 31 ಬಾಲ್​ನಲ್ಲಿ 1 ಸಿಕ್ಸರ್​​, 4 ಫೋರ್​ ಸಮೇತ 39 ರನ್​​ ಬಾರಿಸಿದ್ರು. ಬಳಿಕ ಉತ್ತಮ ಬ್ಯಾಟಿಂಗ್​ ಮಾಡಿದ ಸ್ಟಬ್ಸ್​​ ಕೂಡ 21 ಬಾಲ್​ನಲ್ಲಿ 1 ಸಿಕ್ಸ್​, 3 ಫೋರ್​ ಜತೆಗೆ 31 ರನ್​ ಪಡೆದರು.

ನಂತರ ಭರ್ಜರಿ ಬ್ಯಾಟಿಂಗ್​ ಮಾಡಿದ ಹೆನ್ರಿಕ್​ ಕ್ಲಾಸೆನ್​​​ ಪಂದ್ಯದ ದಿಕ್ಕನ್ನೇ ಬದಲಿಸಿದರು. ತಾನು ಆಡಿದ 27 ಬಾಲ್​ನಲ್ಲಿ 5 ಭರ್ಜರಿ ಸಿಕ್ಸರ್​​, 2 ಫೋರ್​ನೊಂದಿಗೆ 52 ರನ್​ ಸಿಡಿಸಿದ್ರು. ಡೇವಿಡ್​​ ಮಿಲ್ಲರ್​​ 21 ರನ್​​ ಗಳಿಸಿದರು. ಸೌತ್​ ಆಫ್ರಿಕಾ ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 169 ರನ್​​ ಗಳಿಸಿದ್ರು. ಟೀಮ್​ ಇಂಡಿಯಾ ವಿರುದ್ಧ 7 ರನ್​ಗಳಿಂದ ಹೀನಾಯ ಸೋಲು ಕಂಡಿದೆ.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ್ದ ಟೀಮ್​ ಇಂಡಿಯಾದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಎಂದಿನಂತೆ ಅಬ್ಬರಿಸಲು ಮುಂದಾದರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್​ ಶುರು ಮಾಡಿದ ರೋಹಿತ್​​​ ಕೇಶವ್​ ಮಹಾರಾಜ್​​ ಬೌಲಿಂಗ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಫೋರ್​ ಚಚ್ಚಿದರು. ಬಳಿಕ ಮತ್ತೊಂದು ಬೌಂಡರಿ ಬಾರಿಸಲು ಹೋಗಿ ರೋಹಿತ್​ ಕ್ಯಾಚ್​​​ ಕೊಟ್ಟರು.

ಸಾಲು ಸಾಲು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಗೆ ಅಕ್ಷರ್​ ಪಟೇಲ್​ ಬಲ ತುಂಬಿದರು. ಭಾರೀ ಒತ್ತಡದ ಮಧ್ಯೆ ಕೊಹ್ಲಿಗೆ ಸಾಥ್​​ ನೀಡಿ ಸಿಕ್ಸರ್​​ಗಳ ಸುರಿಮಳೆಗೈದರು. ತಾನು ಆಡಿದ 31 ಬಾಲ್​ನಲ್ಲಿ 4 ಭರ್ಜರಿ ಸಿಕ್ಸರ್​​, 1 ಫೋರ್​ ಸಮೇತ 47 ರನ್​ ಚಚ್ಚಿದ್ರು. ಕೊನೆಗೆ ಡಿಕಾಕ್​ನಿಂದ ರನೌಟ್​ ಆದ್ರು. ಇವರ ಸ್ಟ್ರೈಕ್​ ರೇಟ್​​ 150ಕ್ಕೂ ಹೆಚ್ಚು ಇತ್ತು.

ಓಪನರ್​ ಆಗಿ ಬಂದಿದ್ದ ಕೊಹ್ಲಿ ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಬ್ಯಾಟ್​ ಬೀಸಿದರು. ಒತ್ತಡದ ಮಧ್ಯೆ ಕೂಡ ಸ್ಟ್ರೈಕ್​ ರೊಟೇಟ್​ ಮಾಡುತ್ತಾ ವಿಕೆಟ್​ ಬೀಳಿಸದೆ ಅತ್ಯುತ್ತಮ ಆಟ ಆಡಿದರು. ತಾನು ಆಡಿದ 59 ಬಾಲ್​ನಲ್ಲಿ 2 ಭರ್ಜರಿ ಸಿಕ್ಸರ್​​, ಬ್ಯಾಕ್​ ಟು ಬ್ಯಾ 6 ಫೋರ್​​ ಸಮೇತ 76 ರನ್​​​ ಸಿಡಿಸಿದರು. ದುಬೆ 27 ರನ್​​ ಗಳಿಸಿದ ಕಾರಣ ಟೀಮ್​ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್​ಗೆ 176 ರನ್​​ ಕಲೆ ಹಾಕಿತ್ತು.

Ad
Ad
Nk Channel Final 21 09 2023
Ad