Bengaluru 22°C
Ad

12ನೇ ಮಗುವಿಗೆ ತಂದೆಯಾದ ಎಲಾನ್ ಮಸ್ಕ್; 5 ವರ್ಷದಲ್ಲಿ 6 ಬಾರಿ ಅಪ್ಪನ ಪಟ್ಟ

Musk

ನ್ಯೂಯಾರ್ಕ್: ಸ್ಪೆಸ್ ಎಕ್ಸ್, ಟ್ವಿಟರ್, ಟೆಸ್ಲಾ ಸೇರಿದಂತೆ ಹಲವು ಅಗ್ರ ಕಂಪನಿಗಳ ಮಾಲೀಕ ಎಲಾನ್ ಮಸ್ಕ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ 12ನೇ ಮಗುವಿಗೆ ತಂದೆಯಾಗಿದ್ದಾರೆ. ಈ ಕುರಿತು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಎಲಾನ್ ಮಸ್ಕ್ 12ನೇ ಮಗುವಿನ ತಾಯಿ ನ್ಯೂರಾಲಿಂಕ್ ಕಂಪನಿ ಮ್ಯಾನೇಜರ್ ಶಿವೊನ್ ಝಿಲಿಸ್ ಅನ್ನೋ ಮಾಹಿತಿ ಬಹಿರಂಗವಾಗಿದೆ.

ಎಲಾನ್ ಮಸ್ಕ್ 12ನೇ ಮಗುವಿನ ತಂದೆಯಾದ ಖುಷಿಯಲ್ಲಿದ್ದಾರೆ. ಕಳೆದ 5 ವರ್ಷದಲ್ಲಿ ಎಲಾನ್ ಮಸ್ಕ್ 6 ಬಾರಿ ತಂದೆಯಾಗಿದ್ದರೆ. ಇದರಲ್ಲಿ ಎಲಾನ್ ಮಸ್ಕ್ ಮೂರು ಮಕ್ಕಳು ಕೆನಡಾ ಮೂಲದ ಗಾಯಕಿ ಗ್ರಿಮ್ಸ್ ತಾಯಿಯಾಗಿದ್ದರೆ, ಇನ್ನುಳಿದ ಮೂರು ಮಕ್ಕಳು ಶಿವೊನ್ ಝಿಲಿಸ್ ತಾಯಿಯಾಗಿದ್ದಾರೆ. ಇದೀಗ ಮಸ್ಕ್ ಅಪ್ಪನಾಗಿರುವ ಸಂಭ್ರಮವನ್ನು ಮಸ್ಕ್ ಕುಟುಂಬದ ಆಪ್ತ ಮೂಲಗಳು ಹೇಳಿವೆ.ಆದರೆ ಈ ಕುರಿತು ಮಸ್ಕ್ ಹಾಗೂ ಝಿಲಿಸ್ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Ad
Ad
Nk Channel Final 21 09 2023
Ad