News Karnataka Kannada
Tuesday, May 14 2024
ಕ್ರೀಡೆ

ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಮಾರ್ಕೆಟಾ

Wimbledon
Photo Credit : Twitter

ಲಂಡನ್‌: ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್​ನಲ್ಲಿ ಟುನೀಶಿಯಾದ ಓನ್ಸ್ ಜಬೇರ್ ವಿರುದ್ಧ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ಗೆಲುವು ದಾಖಲಿಸಿದ್ದಾರೆ. ಲಂಡನ್‌ನ ಕ್ರೋಕೆಟ್ ಕ್ಲಬ್‌ ಸೆಂಟರ್ ಕೋರ್ಟ್‌ನಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಓನ್ಸ್ ಜಬೇರ್ ಅವರನ್ನು 6-4, 6-4 ಅಂತರದಿಂದ ಸೋಲಿಸಿ ಮಾರ್ಕೆಟಾ ವಿಂಬಲ್ಡನ್ ಕಿರೀಟವನ್ನು ತಮ್ಮದಾಗಿಸಿಕೊಂಡರು. ಭಾರೀ ಪೈಪೋಟಿಯನ್ನು ನಿರೀಕ್ಷಿಸಲಾಗಿದ್ದ ಅಂತಿಮ ಹಣಾಹಣಿಯನ್ನು 24 ವರ್ಷದ ಮಾರ್ಕೆಟಾ ಏಕಪಕ್ಷೀಯವಾಗಿಸಿದ್ದರು.

2022 ರ ವಿಂಬಲ್ಡನ್ ಫೈನಲ್​ನಲ್ಲೂ ಸೋತು ರನ್ನರ್ ಅಪ್ ಆಗಿದ್ದ ಒನ್ಸ್ ಜಬೇರ್ ಈ ಕೂಡ ಒತ್ತಡ ಮೀರಿ ಆಡುವಲ್ಲಿ ವಿಫಲರಾದರು. ಇದರ ಸಂಪೂರ್ಣ ಲಾಭ ಪಡೆದ ಮಾರ್ಕೆಟಾ ಮೊದಲ ಸೆಟ್​ನಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಈ ಮೂಲಕ ಮೊದಲ ಸೆಟ್​ ಅನ್ನು 6-4 ಅಂತರದಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಜಾನಾ ನೊವೊಟ್ನಾ ಮತ್ತು ಪೆಟ್ರಾ ಕ್ವಿಟೋವಾ ನಂತರ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಜೆಕ್ ಗಣರಾಜ್ಯದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಾರ್ಕೆಟಾ ವೊಂಡ್ರೊಸೊವಾ ಪಾತ್ರರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು