News Karnataka Kannada
Monday, May 06 2024
ಕ್ರೀಡೆ

ಕೆರಿಬಿಯನ್ ನಾಡಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಹಿಟ್​ಮ್ಯಾನ್

Rohit Sharma
Photo Credit : Twitter

ಬಹಳ ದಿನಗಳಿಂದ ರನ್ ಬರ ಎದುರಿಸುತ್ತಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವುದರೊಂದಿಗೆ ತಮ್ಮ ಹಳೆ ಲಯಕ್ಕೆ ಮರಳಿದ್ದಾರೆ. 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ ಟೆಸ್ಟ್‌ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ, ಕೋಲ್ಕತ್ತಾದಲ್ಲಿ ನಡೆದ ಆ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದರು. ಇದೀಗ 10 ವರ್ಷಗಳ ನಂತರ ವಿಂಡೀಸ್ ತಂಡದ ವಿರುದ್ಧ ಮತ್ತೊಂದು ಶತಕ ಸಿಡಿಸಿದ್ದಾರೆ. ಅಲ್ಲದೆ ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನ್ನೂರಕ್ಕೂ ಹೆಚ್ಚು ರನ್​ಗಳ ಜೊತೆಯಾಟವನ್ನೂ ಹಂಚಿಕೊಂಡಿದ್ದಾರೆ.

ಶತಕ ಪೂರೈಸಿದ ಮುಂದಿನ ಎಸೆತದಲ್ಲಿಯೇ ರೋಹಿತ್ ವಿಕೆಟ್ (221 ಎಸೆತಗಳಲ್ಲಿ 103 ರನ್) ಒಪ್ಪಿಸಿದರು. ವೆಸ್ಟ್ ಇಂಡೀಸ್‌ ಪರ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಡೊಮಿನಿಕಾದ ಸ್ಥಳೀಯ ಆಟಗಾರ ಅಲಿಕ್ ಅಥ್ನೆಜ್, ರೋಹಿತ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ರೋಹಿತ್ ಅವರ ಈ ಶತಕ ಹಲವು ಕಾರಣಗಳಿಂದ ಅವರಿಗೆ ವಿಶೇಷವಾಗಿತ್ತು. ಇದು ವಿದೇಶಿ ನೆಲದಲ್ಲಿ ರೋಹಿತ್ ಅವರ ಎರಡನೇ ಟೆಸ್ಟ್ ಶತಕವಾಗಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು (7) ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಹಿಟ್​ಮ್ಯಾನ್ ಬರೆದಿದ್ದಾರೆ. ಅಲ್ಲದೆ ಆರಂಭಿಕರಾಗಿ ಈ 7 ಶತಕಗಳನ್ನು ಸಿಡಿಸಿರುವುದು ವಿಶೇಷವಾಗಿದೆ. ಹಾಗೆಯೇ ಆರಂಭಿಕರಾಗಿ ವಿದೇಶಿ ನೆಲದಲ್ಲಿ ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ದಾಖಲೆಯನ್ನು ಸಹ ರೋಹಿತ್ ಬರೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು