News Karnataka Kannada
Monday, April 29 2024
ಕ್ರೀಡೆ

ಭಾರತದ ವಿರುದ್ಧದ 2ನೇ ಟೆಸ್ಟ್​ಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ

west-indies
Photo Credit : By Author

ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. 13 ಸದಸ್ಯರ ಈ ತಂಡದಲ್ಲಿ 23 ವರ್ಷದ ಯುವ ಸ್ಪಿನ್ನರ್ ಕೆವಿನ್ ಸಿಂಕ್ಲೇರ್ ಸ್ಥಾನ ಪಡೆದಿದ್ದಾರೆ. ಅತ್ತ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಲ್​ರೌಂಡರ್​ ರೇಮೊನ್ ರೈಫರ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನುಳಿದಂತೆ ಮೊದಲ ಪಂದ್ಯಕ್ಕೆ ಆಯ್ಕೆಯಾದ ಆಟಗಾರರನ್ನೇ ದ್ವಿತೀಯ ಟೆಸ್ಟ್​ಗೂ ಮುಂದುವರೆಸಲಾಗಿದೆ. ಭಾರತ-ವೆಸ್ಟ್ ಇಂಡೀಸ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ರೋಹಿತ್ ಶರ್ಮಾ ಪಡೆ ಗೆದ್ದುಕೊಂಡಿದೆ.

1-0 ಅಂತರದಲ್ಲಿ ಮುನ್ನಡೆ ಹೊಂದಿರುವ ಟೀಮ್ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಸರಣಿ ವಶಪಡಿಸಿಕೊಳ್ಳಬಹುದು. ಇದಾಗ್ಯೂ ಕಳೆದ ಪಂದ್ಯದಲ್ಲಿ ಬೆಂಚ್ ಕಾದಿದ್ದ ಭಾರತ ತಂಡದ ಕೆಲ ಆಟಗಾರರಿಗೆ 2ನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ.

ವೆಸ್ಟ್ ಇಂಡೀಸ್ ಟೆಸ್ಟ್​ ತಂಡ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥನಾಝ್, ತೇಜ್​ನರೈನ್ ಚಂದ್ರಪಾಲ್, ರಹ್ಕೀಮ್ ಕಾರ್ನ್‌ವಾಲ್, ಜೋಶುಡಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿಕರ್ ಮೆಕೆಂಝಿ, ಕೆಮರ್ ರೋಚ್, ಕೆವಿನ್ ಸಿಂಕ್ಲೇರ್, ಜೊಮೆಲ್ ವಾರಿಕನ್ .
ಮೀಸಲು ಆಟಗಾರರು: ಟೆವಿನ್ ಇಮ್ಲಾಚ್, ಅಕೀಮ್ ಜೋರ್ಡಾನ್.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ , ರವೀಂದ್ರ ಜಡೇಜಾ , ಮುಖೇಶ್ ಕುಮಾರ್, ಅಕ್ಷರ್ ಪಟೇಲ್, ನವದೀಪ್ ಸೈನಿ , ಮೊಹಮ್ಮದ್ ಸಿರಾಜ್ , ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕತ್.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು