News Karnataka Kannada
Thursday, April 25 2024
Cricket
ಬೆಂಗಳೂರು

ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ

gruha lakshmi
Photo Credit : News Kannada

ಬೆಂಗಳೂರು: ರಾಜ್ಯದ ಮಹಿಳೆಯರು ಎದುರು ನೋಡ್ತಿರೋ ಗೃಹಲಕ್ಷ್ಮಿ ಯೋಜನೆಗೆ ಇಂದು(ಜುಲೈ 19) ಚಾಲನೆ ಸಿಗಲಿದೆ.. ಬೆಂಗಳೂರಿನಲ್ಲಿ ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆದ್ರೆ ಆಗಸ್ಟ್​ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2 ಸಾವಿರ ಹಣ ಜಮೆಯಾಗಲಿದೆ.

‘ಗೃಹಲಕ್ಷ್ಮೀ’ ಯೋಜನೆಯಡಿ ಮನೆ ಒಡತಿಗೆ ಪ್ರತೀ ತಿಂಗಳು 2 ಸಾವಿರ ರೂ. ಹಣ ಬರಲಿದೆ. ಇದೇ ಯೋಜನೆ ಅರ್ಜಿ ಸಲ್ಲಿಕೆ ಎಸ್‌ಎಂಎಸ್‌ ಮೂಲಕ ಆರಂಭವಾಗಲಿದೆ. ಮೊದಲಿಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147500500 ಸಂಖ್ಯೆಗೆ SMS ಮಾಡ್ಬೇಕು. ಹೀಗೆ ಎಸ್‌ಎಂಎಸ್‌ ಮಾಡುತ್ತಿದ್ದಂತೆಯೇ ಎರಡೇ ಸೆಕೆಂಡ್‌ನಲ್ಲೇ ಇಲಾಖೆಯಿಂದ ನಿಮಗೆ ಮೇಸೇಜ್‌ ಬರಲಿದೆ. ಅದರಲ್ಲಿ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಬರಲಿದೆ. ಅದೇ ದಿನ, ಅದೇ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಮನೆ ಒಡತಿ ಹೆಸರು ಇರೋ ಪಡಿತರ ಕಾರ್ಡ್‌ ಕಡ್ಡಾಯವಾಗಿದ್ದು, ಇದರ ಜತೆ ಮನೆ ಯಜಮಾನಿಯ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಕೂಡಾ ತೆಗೆದುಕೊಂಡು ಹೋಗಬೇಕು. ಇನ್ನೊಂದು ವಿಚಾರ ಎಂದರೆ ಇಲ್ಲಿ ಮನೆ ಒಡತಿಯ ಪತಿಯ ಆಧಾರ್‌ಕಾರ್ಡ್‌ ಕೂಡಾ ಕಡ್ಡಾಯವಾಗಿದೆ.

ಗೃಹಲಕ್ಷ್ಮಿಯರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕರ್ನಾಟಕ ಒನ್‌, ಗ್ರಾಮ ಒನ್‌, ಬೆಂಗಳೂರು ಒನ್‌ ಸೇರಿದಂತೆ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು