News Karnataka Kannada
Saturday, May 04 2024
ಕ್ರೀಡೆ

ಭಾರತೀಯರ ಆಹಾರ ಆತಿಥ್ಯಕ್ಕೆ ಪಾಕ್‌ ತಂಡ ಫಿದಾ: ವಿಡಿಯೋ ನೋಡಿ

Watch video: Pakistan team to host Indian food
Photo Credit : Twitter

ಹೈದರಾಬಾದ್‌: ಏಕದಿನ ವಿಶ್ವಕಪ್‌ಗಾಗಿ ಪಾಕ್‌ ತಂಡ ಹೈದರಾಬಾದ್‌ ಗೆ ಬಂದಿಳಿದಿದೆ. ಹೈದರಾಬಾದ್‌ ನ ಹೋಟೆಲ್‌ ವೊಂದರಲ್ಲಿ ಉಳಿದುಕೊಂಡಿರುವ ಪಾಕ್‌ ತಂಡಕ್ಕೆ ನೀಡಲಾಗಿರುವ ಆತಿಥ್ಯವನ್ನು ಕಂಡು ಕ್ರಿಕೆಟಿಗರು ಮನಸೋತಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದ ನಂತರ, ಬಾಬರ್ ಅಜಮ್ ನೇತೃತ್ವದ ತಂಡದ ಕ್ರಿಕೆಟಿಗರು ಭೋಜನ ಸವಿದರು. ಅಲ್ಲದೆ ಅಭಿಮಾನಿಗಳೊಂದಿಗೆ ಸೆಲ್ಫಿಗಳನ್ನು ಕ್ಲಿಕ್ ಮಾಡಿ ಸಂಭ್ರಮಿಸಿದರು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟ್ಟರ್ (ಈಗ ಎಕ್ಸ್) ಖಾತೆಯು ತಂಡದ ಭೋಜನದ ವೀಡಿಯೊವನ್ನು ಹಂಚಿಕೊಂಡಿದೆ, ಅಲ್ಲಿ ಆಟಗಾರರು ಊಟ ಮತ್ತು ಸೆಲ್ಫಿಯೊಂದಿಗೆ ಸಂಭ್ರಮಿಸುವುದನ್ನು ಕಾಣಬಹುದು.

ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಸೇರಿ ಪಾಲ್ಗೊಳ್ಳುವ 10 ತಂಡಗಳಿಗಳಿಗೆ ಗೋಮಾಂಸ ನಿಷೇಧಿಸಲಾಗಿದೆ. ಆದ್ದರಿಂದ ಪಾಕಿಸ್ತಾನ ತಂಡಕ್ಕೆ ದೈನಂದಿನ ಪ್ರೋಟೀನ್‌ಯುಕ್ತ ಆಹಾರಕ್ಕಾಗಿ ಕೋಳಿ, ಕುರಿ ಹಾಗೂ ಮೀನು ಆಹಾರ ಪದಾರ್ಥಗಳ ಮೆನು ನೀಡಲಾಗಿದೆ. ಡಯಟ್‌  ಚಾರ್ಟ್ ನಲ್ಲಿ ಗ್ರಿಲ್ಡ್‌ ಲ್ಯಾಂಬ್‌ ಚಾಪ್ಸ್, ಮಟನ್‌ ಕರಿ, ಹೈದರಾಬಾದ್‌ನಲ್ಲಿ ಬಹುಬೇಡಿಕೆಯ ಬಟರ್‌ ಚಿಕನ್‌ ಮತ್ತು ಗ್ರಿಲ್ಡ್‌ ಫಿಶ್‌ ನೀಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 3 / 5. Vote count: 4

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು