News Karnataka Kannada
Wednesday, April 17 2024
Cricket
ಕ್ರೀಡೆ

ಪ್ರತಿಭಾವಂತ ಹಾಕಿ ಆಟಗಾರ ರಾಜೀವ್‌ ಮಿಶ್ರಾ ನಿಧನ

Hockey player Rajiv Mishra passes away
Photo Credit : IANS

ನವದೆಹಲಿ: 1997 ರ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಪ್ರಮುಖ ಸ್ಟ್ರೈಕರ್ ಆಗಿದ್ದ ರಾಜೀವ್ ಮಿಶ್ರಾ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು.

1997 ರ ಇಂಗ್ಲೆಂಡ್‌ನ ಮಿಲ್ಟನ್ ಕೇನ್ಸ್‌ನಲ್ಲಿ ನಡೆದ ಜೂನಿಯರ್ ವಿಶ್ವಕಪ್‌ನಲ್ಲಿ ರಾಜೀವ್ ಭಾರತ ತಂಡವನ್ನು ಮುನ್ನಡೆಸಿದ್ದರು. ಭಾರತವು ಆಸ್ಟ್ರೇಲಿಯಾ ವಿರುದ್ಧ 2-3 ರಿಂದ ಫೈನಲ್‌ನಲ್ಲಿ ಸೋತಿದ್ದರೂ, ಮಿಶ್ರಾ ಪಂದ್ಯಾವಳಿಯಲ್ಲಿ ಆರು ಗೋಲು ಪಡೆದಿದ್ದರು.

ಹಾಕಿ ಇಂಡಿಯಾ ಈ ಕುರಿತು ಟ್ವೀಟ್‌ ಮಾಡಿದ್ದು, “ನಮ್ಮ ಅಂತರಾಷ್ಟ್ರೀಯ ಹಾಕಿ ಆಟಗಾರ ಮತ್ತು 1997 ರ ಎಫ್‌ಐಹೆಚ್ ಜೂನಿಯರ್ ಪುರುಷರ ವಿಶ್ವಕಪ್ ಬೆಳ್ಳಿ ಪದಕ ವಿಜೇತ ರಾಜೀವ್ ಮಿಶ್ರಾ ಅವರ ನಿಧನ ನಮಗೆ ತೀವ್ರ ದುಃಖ ಉಂಟುಮಾಡಿದೆ ಎಂದು ಹೇಳಿದೆ. ಅದೇ ರೀತಿ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಕೂಡ ರಾಜೀವ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು