ಭೋಪಾಲ್: ತಾಂತ್ರಿಕ ದೋಷದಿಂದ ಭಾರತೀಯ ವಾಯುಪಡೆಯ ವಿಮಾನವೊಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನ ಹಳ್ಳಿಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಐಎಏಫ್ ನ ಎಚ್ ಯು ಘಟಕದ ವಿಮಾನವು ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿರುವ ಡುಂಗರಿಯಾ ಗ್ರಾಮದ ಸರೋವರದ ಪಕ್ಕದ ಕಬ್ಬಿನ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಲು ತಜ್ಞರ ತಂಡವು ದಾರಿಯಲ್ಲಿದೆ. ಹೆಲಿಕಾಪ್ಟರ್ನಲ್ಲಿ ಆರು ಸೇನಾ ಸಿಬ್ಬಂದಿ ಇದ್ದರು.