News Karnataka Kannada
Thursday, May 09 2024
ಕ್ರೀಡೆ

ವಿಶ್ವ ಕಪ್‌ 2023: ಪಾಕ್‌ ತಂಡದ ಊಟಕ್ಕೆ ಬೀಫ್‌ ಕೊಡಲ್ಲ ಎಂದ ಬಿಸಿಸಿಐ

Icc Cricket World Cup 2023: BCCI says beef will not be served to Pakistan for their meals
Photo Credit : Twitter

ಹೈದರಾಬಾದ್​: ಬಹುನಿರೀಕ್ಷಿತ ಅ.5 ರಿಂದ ಆರಂಭವಾಗಲಿರುವ ವಿಶ್ವಕಪ್​ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಬಂದಿದೆ. ಅಭ್ಯಾಸ ಪಂದ್ಯಗಳು ಸೇರಿದಂತೆ ತಂಡದ ಕೆಲವು ಪಂದ್ಯಗಳು ಹೈದರಾಬಾದ್​​ನಲ್ಲಿ ನಡೆಯಲಿರುವ ಕಾರಣ ಬಾಬರ್ ಅಜಮ್​ ಬಳಗ ಹೈದರಾಬಾದ್​​ನಲ್ಲಿ ಉಳಿದುಕೊಂಡಿದೆ. 7 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ ಪಾಕ್​ ಬಳಗಕ್ಕೆ ಆತ್ಮೀಯ ಸ್ವಾಗತ ದೊರಕಿದೆ. ಈ ತಂಡಕ್ಕೆ ಉಳಿದೆಲ್ಲ ತಂಡಕ್ಕಿಂತ ಹೆಚ್ಚಿನ ಭದ್ರತೆಯೂ ನೀಡಲಾಗಿದೆ.

ಪಾಕಿಸ್ತಾನದಲ್ಲಿ ಗೋಮಾಂಸ (ಬೀಫ್​) ಸಾಮಾನ್ಯ ಆಹಾರ. ಪ್ರೊಟೀನ್​ಗಾಗಿ ಅಲ್ಲಿನ ಆಟಗಾರರು ಭೀಫ್​ ಬಳಸುತ್ತಾರೆ. ಆದರೆ, ಭಾರತಕ್ಕೆ ಬಂದಿರುವ ಪಾಕ್​ ತಂಡಕ್ಕೆ ಬೀಫ್​ ಕೊಡುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಶುಕ್ರವಾರ ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯಕ್ಕೆ ಮುಂಚಿತವಾಗಿ, ಪಾಕಿಸ್ತಾನ ಕ್ರಿಕೆಟ್ ತಂಡದ ಆಹಾರ ಮೆನುವನ್ನು ಬಹಿರಂಗಪಡಿಸಲಾಗಿದೆ.

ವರದಿ ಪ್ರಕಾರ, ಭಾರತದಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳಿಗೆ ಗೋಮಾಂಸ ಲಭ್ಯವಿರುವುದಿಲ್ಲ. ಪಾಕಿಸ್ತಾನವು ಚಿಕನ್, ಮಟನ್ ಮತ್ತು ಮೀನುಗಳಿಂದ ಪ್ರೋಟೀನ್ ಪಡೆಯುತ್ತದೆ. ತಂಡದ ಡಯಟ್ ಚಾರ್ಟ್ ಗ್ರಿಲ್ಡ್ ಲ್ಯಾಂಬ್ ಚಾಪ್ಸ್, ಮಟನ್ ಕರಿ, ಅತ್ಯಂತ ಜನಪ್ರಿಯ ಬಟರ್ ಚಿಕನ್ ಮತ್ತು ಗ್ರಿಲ್ಡ್ ಮೀನುಗಳನ್ನು ಒಳಗೊಂಡಿದೆ. ಆದರೆ, ಯಾವುದೇ ಕಾರಣಕ್ಕೆ ಭೀಫ್​ ಕೊಡುವುದಕ್ಕೆ ಒಪ್ಪಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 2 / 5. Vote count: 5

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು