News Karnataka Kannada
Sunday, May 12 2024
ಕ್ರೀಡೆ

ಎಂ.ಎಸ್ ಧೋನಿ ಹುಕ್ಕಾ ಸೇದುವ ವಿಡಿಯೋ ವೈರಲ್

ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಅದೆಷ್ಟೋ ಜನರಿಗೆ ಸ್ಫೂರ್ತಿ. ಧೋನಿ ಎಂದರೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಒಂದು ಎಮೋಷನ್​. ಆದರೆ. ಧೋನಿ ಹುಕ್ಕಾ ಸೇದುವ ವಿಡಿಯೊ ಕಂಡು ಅವರ ಅಭಿಮಾನಿಗಳು ದಂಗಾಗಿದ್ದಾರೆ. ಹೌದು. . .ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಾರ್ಜ್​ ಬೈಲಿ ಸಂದರ್ಶನವೊಂದರಲ್ಲಿ ಧೋನಿಗೆ ಅಪಾರ ಹುಕ್ಕಾ ಸೇದುವ ಚಟವಿದೆ ಎಂದು ಹೇಳಿದ್ದರು.
Photo Credit : News Kannada

ಮುಂಬೈ: ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಅದೆಷ್ಟೋ ಜನರಿಗೆ ಸ್ಫೂರ್ತಿ. ಧೋನಿ ಎಂದರೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಒಂದು ಎಮೋಷನ್​. ಆದರೆ. ಧೋನಿ ಹುಕ್ಕಾ ಸೇದುವ ವಿಡಿಯೊ ಕಂಡು ಅವರ ಅಭಿಮಾನಿಗಳು ದಂಗಾಗಿದ್ದಾರೆ. ಹೌದು. . .ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಾರ್ಜ್​ ಬೈಲಿ ಸಂದರ್ಶನವೊಂದರಲ್ಲಿ ಧೋನಿಗೆ ಅಪಾರ ಹುಕ್ಕಾ ಸೇದುವ ಚಟವಿದೆ ಎಂದು ಹೇಳಿದ್ದರು.

ಯುವ ಕ್ರಿಕೆಟಿಗರೊಂದಿಗೆ ತಮ್ಮ ಕೊಠಡಿಯಲ್ಲಿ ಕೂತು ಮಾತನಾಡುವ ವೇಳೆ ಧೋನಿ ಹುಕ್ಕಾ ಸೇದುತ್ತಾರೆ ಎಂದು ಹೇಳಿದ್ದರು. ಆದರೆ ಬೈಲಿಯ ಈ ಮಾತನ್ನು ಯಾರು ಕೂಡ ನಂಬಿರಲಿಲ್ಲ. ಬೈಲಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಧೋನಿ ಹುಕ್ಕಾ ಸೇದುವ ವಿಡಿಯೋ ವೈರಲ್‌ ಆಗಿದೆ.

ಧೋನಿ ತಮ್ಮ ಪರಿವಾರ ಮತ್ತು ಸ್ನೇಹಿತರೊಂದಿಗೆ ಈ ಬಾರಿ ಕ್ರಿಸ್​ಮಸ್​ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯನ್ನು ದುಬೈನಲ್ಲಿ ಮಾಡಿದ್ದಾರೆ. ಈ ವೇಳೆ ಅವರು ತಮ್ಮ ಗೆಳೆಯರೊಂದಿಗಿನ ಪಾರ್ಟಿಯಲ್ಲಿ ಹುಕ್ಕಾ ಸೇದಿದ್ದಾರೆ. ಇದನ್ನು ಅಲ್ಲಿದ ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಕಂಡು ಅವರ ಅಭಿಮಾನಿಗಳು ಪರ ಮತ್ತು ವಿರೋಧದ ಕಮೆಂಟ್​ಗಳನ್ನು ಮಾಡಲಾರಂಭಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು