News Karnataka Kannada
Sunday, April 28 2024
ಕ್ರೀಡೆ

ಪಾಟ್ನಾ: ಗಂಗೂಲಿಯಿಂದ ಆನ್‌ಲೈನ್‌ ಜೂಜಾಟಕ್ಕೆ ಪ್ರೇರಣೆ, ಪಿಐಎಲ್‌ ದಾಖಲು

Pil filed against Ganguly for allegedly instigating online gambling
Photo Credit : IANS

ಪಾಟ್ನಾ: ಬಿಹಾರ ಮುಜಾಫರ್‌ಪುರದ ಸಾಮಾಜಿಕ ಕಾರ್ಯಕರ್ತರೊಬ್ಬರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟಿಗರಾದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ನಟ ಅಮೀರ್ ಖಾನ್ ಮತ್ತು ಇತರರು ಆನ್‌ಲೈನ್‌ ಜೂಜಾಟವನ್ನು ಪ್ರೋತ್ಸಾಹಿಸುತ್ತಾರೆ ಎಂದು ಆರೋಪಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.

ಈ ಕ್ರೀಡಾಪಟುಗಳು ಮತ್ತು ನಟರು ಐಪಿಎಲ್‌ಗೆ ಸಂಬಂಧಿಸಿದ ವಿವಿಧ ಆನ್‌ಲೈನ್ ಗೇಮ್‌ಗಳ ಮೂಲಕ ಜೂಜಾಟದಲ್ಲಿ ತೊಡಗಿಕೊಳ್ಳುವಂತೆ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಮ್ಮನಾ ಹಶ್ಮಿ ಎಂಬುವರು ವಿವರಿಸಿದ್ದಾರೆ. ಆನ್‌ಲೈನ್‌ ಜೂಜಾಟಗಳು ಆಕರ್ಷಕ ಬಹುಮಾನಗಳ ಆಮಿಷವೊಡ್ಡಿ ಯುವಕರನ್ನು ಜೂಜಾಟದ ಚಟಕ್ಕೆ ಬೀಳುವಂತೆ ಮಾಡುತ್ತಿದೆ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 22 ರಂದು ನಿಗದಿಪಡಿಸಲಾಗಿದೆ. ಹಶ್ಮಿ ಅವರು ಈ ಹಿಂದೆ ಹಲವಾರು ವಿಷಯಗಳ ಮೇಲೆ ಪ್ರಮುಖ ವ್ಯಕ್ತಿಗಳ ವಿರುದ್ಧ ಪಿಐಎಲ್‌ಗಳನ್ನು ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು