News Karnataka Kannada
Monday, May 13 2024
ಆರೋಗ್ಯ

ಹೊಸದಿಲ್ಲಿ: ಕ್ಯಾನ್ಸರ್‌ ಪತ್ತೆಗೆ ಕೃತಕ ಬುದ್ಧಿಮತ್ತೆ ಆಧಾರಿತ ರಕ್ತಪರೀಕ್ಷೆ

Artificial Intelligence-based blood test to detect cancer
Photo Credit : IANS

ಹೊಸದಿಲ್ಲಿ: ಗುರುಗ್ರಾಮ್ ಮೂಲದ ಸ್ಟಾರ್ಟ್‌ಅಪ್ ಪ್ರೆಡಾಮಿಕ್ಸ್ ಕೃತಕ ಬುದ್ದಿಮತ್ತೆ ಆಧಾರಿತ ರಕ್ತ ಪರೀಕ್ಷೆ ವಿಧಾನವನ್ನು ಕಂಡುಹಿಡಿದಿದ್ದು, ಇದು ಪುರುಷರು ಮತ್ತು ಮಹಿಳೆಯರಲ್ಲಿ ಸುಮಾರು 32 ಬಗೆಯ ಕ್ಯಾನ್ಸರ್‌ಗಳನ್ನು ಶೇಕಡಾ 98 ರಷ್ಟು ನಿಖರತೆಯೊಂದಿಗೆ ಪತ್ತೆ ಮಾಡುತ್ತದೆ.

ಕಂಪನಿಯ OncoVeryx-F ಒಂದು ಪೇಟೆಂಟ್ ತಂತ್ರಜ್ಞಾನವಾಗಿದ್ದು, ಒಂದೇ ಪರೀಕ್ಷೆಯಲ್ಲಿ ಬಹು ಕ್ಯಾನ್ಸರ್‌ಗಳ ಮೆಟಾಬೊಲೈಟ್ ಗುರುತಿಸಲು ಕೃತಕಬುದ್ದಿ ಮತ್ತೆ (ಎಐ) ವಿಧಾನವನ್ನು ಬಳಸುತ್ತದೆ.

2022 ರಲ್ಲಿ ಮೊದಲು ಪರೀಕ್ಷೆ ಪ್ರಾರಂಭಿಸಲಾಗಿತ್ತು. ಸ್ತನ, ಎಂಡೊಮೆಟ್ರಿಯಮ್, ಗರ್ಭಕಂಠ ಮತ್ತು ಅಂಡಾಶಯ ಕ್ಯಾನ್ಸರ್‌ ಪತ್ತೆಗೆ ಈ ವಿಧಾನ ಬಹುವಾಗಿ ನೆರವಾಗಿದೆ ಎಂದು ಕಂಪನಿ ಹೇಳಿದೆ. ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್, ಮೂತ್ರಪಿಂಡ, ಯಕೃತ್ತಿನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್ ಪತ್ತೆಗೂ ಕೃತಕ ಬುದ್ದಿಮತ್ತೆ ಆಧಾರಿತ ರಕ್ಷಪರೀಕ್ಷೆ ವಿಧಾನವನ್ನು ಬಳಸಲಾಗಿದೆ.

ಆರಂಭಿಕ ಹಂತದಲ್ಲಿ ಕ್ಯಾನ್ಸರ್‌ ಪತ್ತೆಯಾದಲ್ಲಿ ರೋಗಿಯು ಬದುಕುಳಿಯವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣದಿಂದ ಕಂಪನಿಯ ಅನ್ವೇಷಣೆ ಕ್ಯಾನ್ಸರ್‌ ಚಿಕಿತ್ಸೆ, ಪತ್ತೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು