ದೋಹಾ: ಭಾರತದ ತಾರಾ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ವಿಶ್ವ ಕಿರೀಟದ ಗಳಿಕೆಯನ್ನು 27ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ದೋಹಾದಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್(ಪಾಯಿಂಟ್ ಫಾರ್ಮ್ಯಾಟ್)ನಲ್ಲಿ ಭಾರತದವರೇ ಆದ ಸೌರವ್ ಕೊಠಾರಿ ವಿರುದ್ಧ 5-0 ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಇದು ಪಾಯಿಂಟ್ ಫಾರ್ಮ್ಯಾಟ್ನಲ್ಲಿ ಪಂಕಜ್ ಗೆದ್ದ 9ನೇ ವಿಶ್ವ ಕಿರೀಟ.
ಕೆಲ ದಿನಗಳ ಹಿಂದಷ್ಟೇ ಲಾಂಗ್ ಫಾರ್ಮ್ಯಾಟ್ನಲ್ಲಿ ಕೊಠಾರಿ ವಿರುದ್ಧವೇ ಗೆಲ್ಲುವ ಮೂಲಕ ಪಂಕಜ್ 26ನೇ ವಿಶ್ವ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಒಟ್ಟಾರೆ ಪಂಕಜ್ ಬಿಲಿಯರ್ಡ್ಸ್ನ ಲಾಂಗ್ ಫಾರ್ಮ್ಯಾಟ್ನಲ್ಲಿ 9 ಬಾರಿ, ಪಾಯಿಂಟ್ ಫಾರ್ಮ್ಯಾಟ್ನಲ್ಲಿ 9, ಟೀಂ ಚಾಂಪಿಯನ್ಶಿಪ್ನಲ್ಲಿ 1 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಉಳಿದ 8 ವಿಶ್ವ ಕಿರೀಟ ಸ್ನೂಕರ್ನಲ್ಲಿ ಗೆದ್ದಿದ್ದಾರೆ.