News Karnataka Kannada
Wednesday, May 08 2024
ಕ್ರೀಡೆ

ಕೆನಡಾ ಓಪನ್: ಮೊದಲ ಪ್ರಶಸ್ತಿ ಗೆದ್ದ ಲಕ್ಷ್ಯ ಸೇನ್

Canada Open 2023
Photo Credit : Twitter

ಜುಲೈ 9 ರ ಭಾನುವಾರ ಕ್ಯಾಲ್ಗರಿಯಲ್ಲಿ ನಡೆದ ಕೆನಡಾ ಓಪನ್ ಫೈನಲ್ ಪಂದ್ಯದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಲಿ ಶಿ ಫೆಂಗ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ವರ್ಷದ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಎರಡನೇ ಸೆಟ್‌ನಲ್ಲಿ 16-20 ರಿಂದ ಹಿನ್ನಡೆ ಸಾಧಿಸಿದ್ದ ಲಕ್ಷ್ಯ ಸೇನ್, ಸತತ ಆರು ಪಾಯಿಂಟ್‌ಗಳನ್ನು ಗೆದ್ದು ಅಂತಿಮವಾಗಿ ಪ್ರಶಸ್ತಿಯ ಬರವನ್ನು ಕೊನೆಗೊಳಿಸಿದರು. ಕಳೆದ ವರ್ಷ ಇಂಡಿಯಾ ಓಪನ್ ಪ್ರಶಸ್ತಿ ಗೆದ್ದಿದ್ದ ಸೇನ್​ಗೆ ಇದು ಎರಡನೇ BWF ಸೂಪರ್ 500 ಪ್ರಶಸ್ತಿ ಜಯವಾಗಿದೆ.

19ನೇ ಶ್ರೇಯಾಂಕದ ಲಕ್ಷ್ಯ ಸೇನ್ ಪಂದ್ಯವನ್ನು ಉತ್ತಮವಾಗಿ ಪ್ರಾರಂಭಿಸಿ, ಮೊದಲ ಸೆಟ್‌ನಾದ್ಯಂತ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು. ಅಂತಿಮವಾಗಿ ಮೊದಲ ಸೆಟ್ ಅನ್ನು 21-18 ರಿಂದ ಗೆದ್ದುಕೊಂಡರು. ಈ ಗೆಲುವಿನೊಂದಿಗೆ ಸೇನ್ ವಿಶ್ವ ಶ್ರೇಯಾಂಕದಲ್ಲಿ 12ನೇ ಸ್ಥಾನಕ್ಕೆ ಏರಲಿದ್ದು, ಮುಂದೆ ನಡೆಯಲ್ಲಿರುವ ಯುಎಸ್ ಓಪನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು