News Karnataka Kannada
Saturday, April 20 2024
Cricket
ಕ್ರೀಡೆ

ಸುನೀಲ್ ಗವಾಸ್ಕರ್​ಗೆ ಇಂದು 74ನೇ ಹುಟ್ಟುಹಬ್ಬ

Sunil Gavaskar
Photo Credit : Twitter

ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಭಾರತದ ಸುನೀಲ್ ಗವಾಸ್ಕರ್ ಇಂದು (ಜುಲೈ 10) ತಮ್ಮ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 70-80ರ ದಶಕದಲ್ಲಿ ಭಾರತ ಕ್ರಿಕೆಟ್​ ಅನ್ನು ಅಕ್ಷರಶಃ ಆಳಿದ ಪ್ರತಿಭಾವಂತ ಕ್ರಿಕೆಟಿಗ ಗವಾಸ್ಕರ್.

ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಮತ್ತು ಅತಿ ಹೆಚ್ಚು ರನ್‌ ಬಾರಿಸಿರುವವರು ಯಾರು ಎಂದರೆ ಎಲ್ಲರೂ ಸಚಿನ್ ತೆಂಡೂಲ್ಕರ್ ಎನ್ನುತ್ತಾರೆ. ಆದರೆ ಒಂದು ಕಾಲದಲ್ಲಿ ಈ ದಾಖಲೆಗಳು ಗವಾಸ್ಕರ್ ಹೆಸರಿನಲ್ಲಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 10,000 ರನ್‌ಗಳ ಗಡಿ ತಲುಪಿದ ಆಟಗಾರನೆಂಬ ದಾಖಲೆ ಗವಾಸ್ಕರ್ ಹೆಸರಿನಲ್ಲಿದೆ.

1970-71ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿ ಕಾಲಿರಿಸಿದ ಗಾವಸ್ಕರ್, ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ವಿಂಡೀಸ್‌ನ ಅಪಾಯಕಾರಿ ಬೌಲಿಂಗ್ ದಾಳಿಯ ಮುಂದೆ ನಾಲ್ಕು ಶತಕ, ಮೂರು ಅರ್ಧಶತಕಗಳ ಸಹಾಯದಿಂದ 774 ರನ್ ಕಲೆಹಾಕಿದರು. ಈ ಸರಣಿಯಲ್ಲಿ ಅವರ ಸರಾಸರಿ 154.80 ಆಗಿತ್ತು. ಇದರೊಂದಿಗೆ ಗವಾಸ್ಕರ್ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕೂಡ ಬರೆದಿದ್ದರು.

1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಗವಾಸ್ಕರ್, ಅದರ ಹಿಂದಿನ ವಿಶ್ವಕಪ್‌ನಲ್ಲಿ ಅಂದರೆ 1979ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 174 ಎಸೆತಗಳಲ್ಲಿ 36 ರನ್ ಗಳಿಸಿದ್ದು ಮುಜುಗರದ ದಾಖಲೆಯಾಗಿ ಉಳಿದಿದೆ.

ಟೆಸ್ಟ್‌ ಮಾದರಿಯಲ್ಲಿ ಭಾರತದ ಪರ 125 ಟೆಸ್ಟ್ ಪಂದ್ಯಗಳನ್ನಾಡಿರುವ ಗವಾಸ್ಕರ್, ಏಕದಿನ ಮಾದರಿಯಲ್ಲಿ ಭಾರತದ ಪರ 108 ಪಂದ್ಯಗಳನ್ನಾಡಿದ್ದಾರೆ. 47 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು