Bengaluru 26°C
Ad

ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು : ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

ಅಮೆರಿಕದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ ರ್ನಿಯ ಗ್ರೂಪ್‌ ಹಂತದ ಭಾರತ ಹಾಗೂ ಕೆನಡಾ ನಡುವಿನ ಪಂದ್ಯವು ಭಾರಿ ಮಳೆಯಿಂದಾಗಿ ರದ್ಧಾಗಿದೆ. ಶನಿವಾರ (ಜೂನ್‌ 15) ಲಾಡರ್‌ಹಿಲ್‌ನಲ್ಲಿರುವ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯವು ರದ್ದಾಯಿತು. ಇದರಿಂದಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು.

ಯುಎಸ್‌ಎ : ಅಮೆರಿಕದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ ರ್ನಿಯ ಗ್ರೂಪ್‌ ಹಂತದ ಭಾರತ ಹಾಗೂ ಕೆನಡಾ ನಡುವಿನ ಪಂದ್ಯವು ಭಾರಿ ಮಳೆಯಿಂದಾಗಿ ರದ್ಧಾಗಿದೆ. ಶನಿವಾರ (ಜೂನ್‌ 15) ಲಾಡರ್‌ಹಿಲ್‌ನಲ್ಲಿರುವ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯವು ರದ್ದಾಯಿತು. ಇದರಿಂದಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು.

ಗ್ರೂಪ್‌ ಹಂತದಲ್ಲಿ ಒಂದೂ ಪಂದ್ಯ ಸೋಲದ ಭಾರತ ತಂಡವು 7 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೂಪರ್‌ 8 ಹಂತಕ್ಕೆ ಪ್ರವೇಶ ಪಡೆದಿದೆ. ಕಳೆದ ಹಲವು ದಿನಗಳಿಂದ ಲಾಡರ್‌ಹಿಲ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ನಡೆಯಬೇಕಿದ್ದ ಎರಡೂ ಪಂದ್ಯಗಳು ರದ್ದಾಗಿದ್ದವು. ಭಾರತ ಹಾಗೂ ಕೆನಡಾ ಪಂದ್ಯಕ್ಕೂ ಮಳೆಯ ಭೀತಿ ಇತ್ತು.

ಹವಾಮಾನ ಇಲಾಖೆಯೂ ಎಚ್ಚರಿಕೆ ನೀಡಿತ್ತು. ಅದರಂತೆ, ಕೊನೆಗೆ ಟಾಸ್‌ ಕೂಡ ನಡೆಯದೆ ಪಂದ್ಯವನ್ನು ರದ್ದುಗೊಳಿಸಿ, ಅಂಕಗಳನ್ನು ಸಮನಾಗಿ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ಭಾರತ ಹಾಗೂ ಅಮೆರಿಕ ತಂಡವು ಸೂಪರ್‌ 8 ಪ್ರವೇಶಿಸಿವೆ. ಭಾನುವಾರ ಐರ್ಲೆಂಡ್‌ ಹಾಗೂ ಪಾಕಿಸ್ತಾನ ತಂಡಗಳು ಗ್ರೂಪ್‌ ಹಂತದ ಹಾಗೂ ಟೂರ್ನಿಯ ಕೊನೆಯ ಪಂದ್ಯವನ್ನು ಆಡಲಿವೆ.

Ad
Ad
Nk Channel Final 21 09 2023
Ad