News Karnataka Kannada
Friday, May 10 2024
ಕ್ರೀಡೆ

ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತು: ನೆದರ್​ಲ್ಯಾಂಡ್ಸ್​​ಗೆ ಸೋಲುಣಿಸಿದ ಶ್ರೀಲಂಕಾ

sri-lanka beats netherlands
Photo Credit : Twitter

ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ನೆದರ್​ಲ್ಯಾಂಡ್ಸ್ ವಿರುದ್ಧ ಶ್ರೀಲಂಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್​ಲ್ಯಾಂಡ್ಸ್ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಲಂಕಾ ಪರ ಆರಂಭಿಕರಾದ ಪಾತುಂ ನಿಸ್ಸಂಕಾ (23) ಹಾಗೂ ಸಮರವಿಕ್ರಮ (19) ಮೊದಲ ವಿಕೆಟ್​ಗೆ 39 ರನ್ ಪೇರಿಸಿದರು.

ಇನ್ನು ಕುಸಾಲ್ ಮೆಂಡಿಸ್ 43 ರನ್ ಬಾರಿಸಿದರೆ, ಸಹಾನ್ ಅರಚ್ಚಿಗೆ 71 ಎಸೆತಗಳಲ್ಲಿ 57 ರನ್​ ಕಲೆಹಾಕಿದರು. ಹಾಗೆಯೇ ಅಸಲಂಕಾ 36 ರನ್​ಗಳ ಕಾಣಿಕೆ ನೀಡಿದರು. 47.5 ಓವರ್​ಗಳಲ್ಲಿ 233 ರನ್​ಗಳಿಗೆ ಶ್ರೀಲಂಕಾ ಆಲೌಟ್ ಆಯಿತು. 234 ರನ್​ಗಳ ಸುಲಭ ಗುರಿಯೊಂದಿಗೆ ಇನಿಂಗ್ಸ್​ ಆರಂಭಿಸಿದ ನೆದರ್​ಲ್ಯಾಂಡ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಶ್ರೀಲಂಕಾ ಬೌಲರ್​ಗಳು ಯಶಸ್ವಿಯಾದರು. ಅಲ್ಲದೆ 23.3 ಓವರ್​ಗಳಲ್ಲಿ 105 ರನ್​ಗಳಿಗೆ ನೆದರ್​ಲ್ಯಾಂಡ್ಸ್​ ತಂಡವನ್ನು ಆಲೌಟ್ ಮಾಡಿ ಶ್ರೀಲಂಕಾ ತಂಡವು 128 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ತಂಡವು ಟ್ರೋಫಿಯನ್ನು ಎತ್ತಿ ಹಿಡಿದಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು