News Karnataka Kannada
Wednesday, May 01 2024
ಕ್ರೀಡೆ

ವಿಶ್ವಕಪ್ ಟೂರ್ನಿ: ಇಂದು ದಕ್ಷಿಣ ಆಫ್ರಿಕಾ-ಪಾಕ್ ಮುಖಾಮುಖಿ

 South Africa To Face Pakistan
Photo Credit : News Kannada

ಚೆನ್ನೈ: ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲಿನ ಬಳಿಕ ಸಂಪೂರ್ಣವಾಗಿ ಲಯ ತಪ್ಪಿರುವ ಪಾಕಿಸ್ತಾನ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ತನ್ನ 6ನೇ ಲೀಗ್ ಪಂದ್ಯದಲ್ಲಿ ಇಂದು ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಚಿದಂಬರಂ ಅಂಗಣದಲ್ಲೇ ಎದುರಿಸಲಿದೆ. ಟೂರ್ನಿಯ ನೀರಸ ನಿರ್ವಹಣೆಯಿಂದ ನಾಯಕ ಬಾಬರ್ ಅಜಮ್ ತಲೆದಂಡದ ಭೀತಿಯಲ್ಲಿದ್ದಾರೆ. ಚೆಪಾಕ್ ಅಂಗಣದಲ್ಲಿ ಮಾಜಿ ಚಾಂಪಿಯನ್ನರ ಭವಿಷ್ಯ ನಿರ್ಧಾರವಾಗಲಿದೆ.

ಬಲಿಷ್ಠ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿರುವ ಹರಿಣ ಪಡೆ, ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಸೆಮೀಸ್‌ಗೆ ಸಮೀಪದಲ್ಲಿದೆ. ಆಫ್ರಿಕನ್ನರಿಗೆ ಕ್ವಿಂಟನ್ ಡಿಕಾಕ್, ಏಡೆನ್ ಮಾರ್ಕ್ರಮ್ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್ ಬಲವಿದೆ. 4 ಪಂದ್ಯಗಳಲ್ಲಿ 300ಕ್ಕೂ ಅಧಿಕ ರನ್ ಪೇರಿಸಿರುವ ಆಫ್ರಿಕಾ ಬ್ಯಾಟರ್‌ಗಳಿಗೆ ಬೌಲಿಂಗ್ ವಿಭಾಗ ಸೂಕ್ತ ಬೆಂಬಲ ಒದಗಿಸಿದೆ. ಕಗಿಸೋ ರಬಾಡ, ಮಾರ್ಕೋ ಜಾನ್ಸೆನ್ ಉತ್ತಮ ಲಯದಲ್ಲಿದ್ದಾರೆ.

ಇತ್ತ ಟೂರ್ನಿಯ ಸೆಮೀಸ್ ಹಾದಿ ಕಠಿಣ ಎನಿಸಿದರೂ, ಪಾಕಿಸ್ತಾನಕ್ಕೆ ಇನ್ನೊಂದು ಸೋಲು ಸಂಪೂರ್ಣ ಬಾಗಿಲು ಮುಚ್ಚಲಿದೆ. ಕಳಪೆ ಪ್ರದರ್ಶನದ ಬಿಸಿ ಎದುರಿಸುತ್ತಿರುವ ಬಾಬರ್ ಪಡೆ ಮುಂದಿನ 4 ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು