News Karnataka Kannada
Friday, May 17 2024
ದೆಹಲಿ

ಐಸಿಸಿ ವಿಶ್ವಕಪ್ ಟೂರ್ನಿ: ಇಂಡೋ-ಪಾಕ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ

world cup 2023
Photo Credit : News Kannada

ನವದೆಹಲಿ:  2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿದೆ. ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯವು ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಇದೀಗ ಇಂಡೋ-ಪಾಕ್‌ ವಿಶ್ವಕಪ್ ಪಂದ್ಯದ ಆಯೋಜನೆಯ ಕುರಿತಂತೆ ಆತಂಕದ ಕಾರ್ಮೋಡ ಕವಿದಿದ್ದು, ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ವಾಸ್ತವವಾಗಿ ಅಕ್ಟೋಬರ್ 15 ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಆ ದಿನವೇ ನವರಾತ್ರಿಯ ಮೊದಲ ದಿನವಾಗಿರುವುದು ಪಂದ್ಯಕ್ಕೆ ತಡೆಯೊಡ್ಡುತ್ತಿದೆ.

ಉತ್ತರ ಭಾರತದಲ್ಲಿ, ಅದರಲ್ಲೂ ಗುಜರಾತ್​​ನಲ್ಲಿ ನವರಾತ್ರಿಯ ಮೊದಲ ದಿನವನ್ನು ರಾತ್ರಿಯಿಡಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೀಗಾಗಿ ಆ ದಿನವೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯವನ್ನು ನಡೆಸಿದರೆ, ಭಾರಿ ಪ್ರಮಾಣದ ಪ್ರೇಕ್ಷಕರು ಮೈದಾನಕ್ಕೆ ಬರಲಿದ್ದಾರೆ.

ಹೀಗಾಗಿ ಪಂದ್ಯದ ವೇಳೆ ಭದ್ರತೆ ಒದಗಿಸುವುದು ಕೊಂಚ ಕಷ್ಟಕರವಾಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಏಜೆನ್ಸಿಗಳು ಪಂದ್ಯವನ್ನು ಬೇರೆ ದಿನ ನಡೆಸುವಂತೆ ಬಿಸಿಸಿಐಗೆ ಸೂಚಿಸಿವೆ. ಈ ಬಗ್ಗೆ ಚರ್ಚೆ ನಡೆಸುತ್ತಿರುವ ಬಿಸಿಸಿಐ ಶೀಘ್ರದಲ್ಲೇ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಮೂಲಗಳು ವರದಿ ಮಾಡಿವೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು